Kannada Duniya

ಯಾವ ಗ್ರಹದೋಷವಿದ್ದರೆ ನಿಮ್ಮ ಯಾವ ಸಂಬಂಧ ಕೆಡುತ್ತದೆ ಎನ್ನುವುದನ್ನು ತಿಳಿದುಕೊಳ್ಳಿ

ಜ್ಯೋತಿಷ್ಯಶಾಸ್ತ್ರದ ಪ್ರಕಾರ ನವಗ್ರಹಗಳಲ್ಲಿ ಒಂದೊಂದು ಗ್ರಹಗಳು ಒಂದೊಂದು ಸಂಬಂಧಗಳನ್ನು ಸೂಚಿಸುತ್ತದೆ. ಹಾಗಾದ್ರೆ ಯಾವ ಗ್ರಹ ದೋಷವಿದ್ದರೆ ನಿಮ್ಮ ಯಾವ ಸಂಬಂಧ ಕೆಡುತ್ತದೆ ಎಂಬುದನ್ನು ತಿಳಿದುಕೊಳ್ಳಿ.

ಸೂರ್ಯ ಗ್ರಹ ದೋಷವಿದ್ದರೆ ನಿಮ್ಮ ತಂದೆಯೊಂದಿಗಿನ ಸಂಬಂಧ ಹದಗೆಡುತ್ತದೆಯಂತೆ. ಅಲ್ಲದೇ ತಂದೆಗೆ ಗೌರವ ನೀಡದಿದ್ದರೆ ನಿಮ್ಮ ಸೂರ್ಯ ದೋಷ ಉಂಟಾಗುತ್ತದೆಯಂತೆ.

ಹಾಗೇ ತಾಯಿಯ ಜೊತೆ ಕೆಟ್ಟದಾಗಿ ವರ್ತಿಸಿದರೆ ಚಂದ್ರ ದೋಷವನ್ನು ಹೊಂದುತ್ತೀರಿ. ಹಾಗಾಗಿ ಹುಣ್ಣಿಮೆಯ ದಿನ ಉಪವಾಸವನ್ನು ಮಾಡಿ ತಾಯಿಯ ಸಂಬಂಧವನ್ನು ಗಟ್ಟಿಗೊಳಿಸಿಕೊಳ್ಳಿ.

ನಿಮ್ಮ ಜಾತಕದಲ್ಲಿ ಮಂಗಳನು ಬಲವಾಗಿದ್ದರೆ ಅತ್ತೆ, ಮಾವ, ಚಿಕ್ಕಪ್ಪ, ಚಿಕ್ಕಮ್ಮನ ಸಂಬಂಧ ಉತ್ತಮವಾಗಿರುತ್ತದೆಯಂತೆ.

ಹಾಗೇ ಜಾತಕದಲ್ಲಿ ಬುಧ ಗ್ರಹ ದೋಷವಿದ್ದರೆ ತಾಯಿಯ ಚಿಕ್ಕಮ್ಮ ಮತ್ತು ಅಜ್ಜಿಯರ ಸಂಬಂಧ ಕೆಡುತ್ತದೆಯಂತೆ. ಅಂತವರು ಪ್ರತಿ ಬುಧವಾರ ಗಣೇಶನನ್ನು ಪೂಜಿಸಿ.

ಹಾಗೇ ಗುರು ಹಿರಿಯರು ಅಜ್ಜ, ಅಜ್ಜಿಗೆ ಗೌರವ ನೀಡಿದರೆ ಗುರು ಗ್ರಹ ಬಲಗೊಳ್ಳುತ್ತದೆಯಂತೆ. ಇದರಿಂದ ಯಾವುದೇ ಕ್ಷೇತ್ರದಲ್ಲಿ ಏಳಿಗೆ ಕಾಣುತ್ತೀರಂತೆ.

ನಿಮ್ಮ ಸಂಗಾತಿ ಮತ್ತು ಸ್ನೇಹಿತರ ಜೊತೆ ಸಂಬಂಧ ಉತ್ತಮವಾಗಿರಲು ಜಾತಕದಲ್ಲಿ ಶುಕ್ರ ಗ್ರಹ ಬಲವಾಗಿರಬೇಕಂತೆ.

ಹಾಗೇ ತಂದೆ, ಅತ್ತೆ ಮಾವ, ಪುತ್ರ ಪುತ್ರಿಯರ ಜೊತೆಗಿನ ಸಂಬಂಧ ಉತ್ತಮವಾಗಿರಬೇಕೆಂದರೆ ಶನಿಯ ಸ್ಥಾನ ಬಲವಾಗಿರಬೇಕಂತೆ.

ಕೇತು ದೋಷವಿದ್ದರೆ ಅತ್ತೆ, ಮಾವ, ಅಜ್ಜ, ಅಜ್ಜಿಯ ಸಂಬಂಧ ಹದಗೆಡುತ್ತದೆಯಂತೆ. ಹಾಗೇ ಕಚೇರಿಯಲ್ಲಿ ಸಹದ್ಯೋಗಿಗಳೊಂದಿಗೆ ಸಂಬಂಧ ಉತ್ತಮವಾಗಿರಲು ರಾಹು ಕೇತುವಿನ ಅನುಗ್ರಹವಿರಬೇಕಂತೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...