Kannada Duniya

ಈ ವಿಧಾನ ಬಳಸಿ ಫ್ರಿಜ್ ನಲ್ಲಿಟ್ಟ ಮೆಣಸಿನಕಾಯಿಯಿಂದ ಗಿಡ ಬೆಳೆಸಿ

ಹೆಚ್ಚಿನವರು ತರಕಾರಿ, ಹಣ್ಣು್ಗಳನ್ನು ಫ್ರಿಜ್ ನಲ್ಲಿ ಇಡುತ್ತಾರೆ. ಹಾಗೇ ಅಡುಗೆಗೆ ಬಳಸಿ ಮೆಣಸಿನಕಾಯಿಯನ್ನು ಕೂಡ ಫ್ರಿಜ್ ನಲ್ಲಿ ಇಡುತ್ತಾರೆ. ಆದರೆ ಈ ಮೆಣಸಿನಕಾಯಿ ಬೀಜದಿಂದ ಕೂಡ ನೀವು ಮೆಣಸಿನ ಗಿಡವನ್ನು ಬೆಳೆಸಬಹುದು. ಅದು ಹೇಗೆಂಬುದನ್ನು ತಿಳಿದುಕೊಳ್ಳೋಣ.

 

ಮೆಣಸಿನ ಕಾಯಿ ಕತ್ತರಿಸಿ ಕೈಗಳು ಉರಿಯುತ್ತಿದ್ದರೆ ಹೀಗೆ ಮಾಡಿ

 

ಕೆಂಪು ಮೆಣಸಿನಕಾಯಿಯನ್ನು ಆರಿಸಿಕೊಳ್ಳಿ. ಅದನ್ನು ಫ್ರಿಜ್ ನಿಂದ ಹೊರತೆಗೆದು 1 ದಿನವಿಡೀ ಹೊರಗೆ ಇಡಿ. ಬಳಿಕ ಅದರಿಂದ ಬೀಜಗಳನ್ನು ಹೊರತೆಗೆಯಿರಿ. ಬಳಿಕ ಆ ಬೀಜಗಳನ್ನು ಟಿಶ್ಯೂ ಪೇಪರ್ ನಲ್ಲಿ ಹಾಕಿ ನೀರನ್ನು ಸಿಂಪಡಿಸಿ ಮುಚ್ಚಿ ಇಡಿ. ಬಳಿಕ ಅವುಗಳನ್ನು ಮಣ್ಣಿನಲ್ಲಿ 1 ಇಂಚಿನ ಆಳದಲ್ಲಿ ನೆಡಿ. ಇದನ್ನು ಗಾಳಿ ಮತ್ತು ಬಿಸಿಲಿನಲ್ಲಿ 2-3 ಗಂಟೆಗಳ ಕಾಲ ಇಡಿ. ಬೀಜಗಳು 2 ವಾರಗಳಲ್ಲೇ ಮೊಳಕೆಯೊಡೆಯುತ್ತದೆ. ಇದನ್ನು ಗಾಳಿಯಲ್ಲಿ ಇಡಿ. ಇದಕ್ಕೆ 2 ದಿನಕ್ಕೊಮ್ಮೆ ನೀರು ಹಾಕಿ.

 

1 ತಿಂಗಳ ಬಳಿಕ ಸಸ್ಯ ಬೆಳೆಯುತ್ತದೆ. ಹಾಗೇ 15 ದಿನಕ್ಕೊಮ್ಮೆ ಬಾಳೆಹಣ್ಣಿನ ಸಿಪ್ಪೆ, ಗೊಬ್ಬರವನ್ನು ಗಿಡದ ಬುಡದಲ್ಲಿ ಅಗೆದು ಹಾಕಬೇಕು. ತಿಂಗಳಲ್ಲೇ ಹೂ ಬಿಡಲು ಪ್ರಾರಂಭವಾಗುತ್ತದೆ. ಮತ್ತು ಸಸ್ಯದಲ್ಲಿ ತುಂಬಾ ಎಲೆಗಳಿದ್ದರೆ ಅದನ್ನು ಕತ್ತರಿಸಬೇಕು. ಇದರಿಂದ ಸಸ್ಯ ಎಲೆಗಳನ್ನು ಪೋಷಿಸುವುದನ್ನು ಬಿಟ್ಟು ಹೂಗಳ ಕಡೆಗೆ ಗಮನಹರಿಸುತ್ತದೆ. ಹೀಗೆ 3 ತಿಂಗಳಲ್ಲೇ ಮೆಣಸಿನ ಗಿಡದಲ್ಲಿ ಮೆಣಸಿನಕಾಯಿ ಆಗಲು ಶುರುವಾಗುತ್ತದೆ. ಹಾಗೇ ಗಿಡವನ್ನು ಸೂರ್ಯ ಬಿಸಿಲಿನಲ್ಲಿ ಇಡಬೇಡಿ.

 

Leads to grow a chilli plant from chillies kept in fridge.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...