Kannada Duniya

ಹೋಳಿ ಹಬ್ಬದ ದಿನ ರಸ್ತೆಯ ಬದಿಯಲ್ಲಿ ಈ ಗಿಡ ನೆಟ್ಟರೆ ಸಮಸ್ಯೆಗಳು ನಿವಾರಣೆಯಾಗುತ್ತದೆಯಂತೆ

ಮಾರ್ಚ್ 25ರಂದು ಹುಣ್ಣಿಮೆಯ ದಿನ ಹೋಳಿ ಹಬ್ಬವನ್ನು ಆಚರಿಸಲಾಗುತ್ತದೆ. ಈ ದಿನ ಅಧರ್ಮವನ್ನು ಸುಟ್ಟು ಹಾಕಿ ಧರ್ಮವನ್ನು ಎತ್ತಿ ಹಿಡಿದ ದಿನ ಎನ್ನಲಾಗುತ್ತದೆ. ಹಾಗಾಗಿ ಈ ದಿನ ನಿಮ್ಮ ಜೀವನದ ಎಲ್ಲಾ ಸಮಸ್ಯೆಗಳನ್ನು ಕೂಡ ನಿವಾರಣೆ ಮಾಡಿಕೊಳ್ಳಬಹುದು. ಅದಕ್ಕಾಗಿ ಈ ದಿನ ರಸ್ತೆ ಬದಿಯಲ್ಲಿ ಈ ಗಿಡವನ್ನು ನೆಡಿ.

ಮಂಗಳ ದೋಷದಿಂದ ಎದುರಾದ ಸಮಸ್ಯೆಗಳನ್ನು ನಿವಾರಿಸಲು ರಸ್ತೆ ಬದಿಯಲ್ಲಿ ಹನುಮಾನ ದೇವಸ್ಥಾನ ಇರುವ ಕಡೆ ಪಾರಿಜಾತದ ಗಿಡವನ್ನು ನೆಡಿ.

ಹಾಗೇ ಸೂರ್ಯ ದೋಷವನ್ನು ನಿವಾರಿಸಲು ಹೋಳಿ ಹಬ್ಬದಂದು ರಸ್ತೆಯ ಬದಿಯಲ್ಲಿ ಅಥವಾ ಮನೆಯ ಸುತ್ತಮುತ್ತ ಎಕ್ಕದ ಗಿಡವನ್ನು ನೆಡಿ. ಇದರಿಂದ ಜೀವನದಲ್ಲಿ ಎದುರಾದ ಅಡೆತಡೆಗಳು ನಿವಾರಣೆಯಾಗುತ್ತದೆ.

ಹಾಗೇ ಜಾತಕದಲ್ಲಿ ಶುಕ್ರ ದೋಷವನ್ನು ನಿವಾರಿಸಲು ರಸ್ತೆಯ ಬದಿಯಲ್ಲಿ ಅತ್ತಿ ಗಿಡವನ್ನು ನೆಡಿ. ಇದರಿಂದ ನೀವು ಜೀವನದಲ್ಲಿ ಸುಖವನ್ನು ಕಾಣುತ್ತೀರಿ.
ಅಲ್ಲದೇ ಶನಿಯ ಕೆಟ್ಟ ದೃಷ್ಟಿಯನ್ನು ನಿವಾರಿಸಲು ಹೋಳಿ ಹಬ್ಬದ ದಿನ ರಸ್ತೆಯ ಬದಿಯಲ್ಲಿ ಶಮಿ ಗಿಡವನ್ನು ನೆಡಿ.

ಹಾಗೇ ರಾಹು ದೋಷವನ್ನು ತಪ್ಪಿಸಲು ಶ್ರೀಗಂಧ, ಬೇವು, ದಾಳಿಂಬೆ ಮತ್ತು ಅರಳೀಮರದ ಗಿಡವನ್ನು ನೆಡಿ. ಅಲ್ಲದೇ ಕೇತು ದೋಷವನ್ನು ನಿವಾರಿಸಲು ಆಲದ ಮರವನ್ನು ನೆಡಿ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...