Kannada Duniya

ಮೆಣಸಿನ ಕಾಯಿ ಕತ್ತರಿಸಿ ಕೈಗಳು ಉರಿಯುತ್ತಿದ್ದರೆ ಹೀಗೆ ಮಾಡಿ…!

ಅಡುಗೆ ಮಾಡುವಾಗ ಖಾರಕ್ಕಾಗಿ ಮೆಣಸಿನಕಾಯಿಯನ್ನು ಬಳಸುತ್ತೇವೆ. ಆದರೆ ಇದು ತುಂಬಾ ಖಾರವಿರುವುದರಿಂದ ಇದನ್ನು ಕತ್ತರಿಸಿದಾಗ ಕೈಗಳು ಉರಿಯುತ್ತದೆ. ಆಗ ಅದೇ ಕೈಗಳಿಂದ ಮೂಗು, ಬಾಯಿ, ಕಣ್ಣುಗಳನ್ನು ಮುಟ್ಟಿದರೆ ಉರಿಬರುತ್ತದೆ. ಹಾಗಾಗಿ ಈ ಉರಿಯನ್ನು ಕಡಿಮೆ ಮಾಡಲು ಈ ಟಿಪ್ಸ್ ಫಾಲೋ ಮಾಡಿ.

*ಅಲೋವೆರಾ ಜೆಲ್ ಬಳಕೆ : ಇದರಿಂದ ಮೆಣಸಿನಕಾಯಿ ಉರಿಯನ್ನು ಕಡಿಮೆ ಮಾಡಿಕೊಳ್ಳಬಹುದು. ಇದನ್ನು ಕೈಗೆ ಹಚ್ಚಿ 2 ನಿಮಿಷಗಳ ಕಾಲ ಮಸಾಜ್ ಮಾಡಿ. ಇದರಿಂದ ಕೈಗಳಲ್ಲಿ ಕಂಡುಬಂದ ಸುಡುವ ವೇದನೆ ಕಡಿಮೆಯಾಗುತ್ತದೆ.

*ಮೊಸರು , ಬೆಣ್ಣೆ ಅಥವಾ ಹಾಲಿನ ಬಳಕೆ : ಮೆಣಸಿನ ಕಾಯಿ ಕತ್ತರಿಸಿ ಕೈಯಲ್ಲಿ ಸುಡುವ ವೇದನೆ ಕಾಡಿದರೆ ನಿಮ್ಮ ಕೈಗಳನ್ನು ಮೊಸರಿನಿಂದ ಅಥವಾ ಹಾಲಿನಿಂದ ಅಥವಾ ಬೆಣ್ಣೆಯಿಂದ ಮಸಾಜ್ ಮಾಡಿ. ಬಳಿಕ ನೀರಿನಿಂದ ವಾಶ್ ಮಾಡಿ.

ಅಡುಗೆಗೆ ಬಳಸುವ ಈ ವಸ್ತುಗಳನ್ನು ಹಲವು ದಿನಗಳವರೆಗೆ ಬಳಸಬಹುದು

*ಜೇನುತುಪ್ಪ ಬಳಕೆ : ಮೆಣಸಿನಕಾಯಿಯಿಂದ ಕೈಗಳು ಸುಡುತ್ತಿದ್ದರೆ ಜೇನುತುಪ್ಪವನ್ನು ಹಚ್ಚಿ. ಇದು ಉರಿಯನ್ನು ಕಡಿಮೆ ಮಾಡುವ ಗುಣಗಳನ್ನು ಹೊಂದಿದೆ. ಬಳಿಕ ನೀರಿನಿಂದ ಕೈಗಳನ್ನು ತೊಳೆಯಿರಿ.

* ಮಂಜುಗಡ್ಡೆ ಬಳಕೆ : ಮೆಣಸಿನಕಾಯಿ ಕತ್ತರಿಸಿ ಕೈಗಳು ಉರಿಯುತ್ತಿದ್ದರೆ ಕೈಗಳಿಗೆ ಐಸ್ ಕ್ಯೂಬ್ ನಿಂದ ಮಸಾಜ್ ಮಾಡಿ. ಇದರಿಂದ ಉರಿ ತಕ್ಷಣ ಕಡಿಮೆಯಾಗುತ್ತದೆ.

Follow these tips to reduce hands burning from cutting chillies
ಮೊಸರು, ಹಾಲು, ಮಂಜುಗಡ್ಡೆ, ಜೇನುತುಪ್ಪ, Curd, Milk, Ice Cube, Honey


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...