Kannada Duniya

ವರ್ಕ್ ಫ್ರಂ ಹೋಮ್: ಎಷ್ಟು ಕಷ್ಟ ಗೊತ್ತಾ ?

ಒಂದು ಕಡೆಯಲ್ಲಿ ವರ್ಕ್ ಫ್ರಮ್ ಹೋಮ್ ಒತ್ತಡ, ಇನ್ನೊಂದು ಕಡೆಯಲ್ಲಿ ಮಕ್ಕಳಿಗೂ ಆನ್ ಲೈನ್ ಕ್ಲಾಸ್ ಗಳಿಲ್ಲ. ಇವುಗಳ ಮಧ್ಯೆ ನೀವು ಬಸವಳಿದಿದ್ದೀರೇ?

ಕಚೇರಿಗೆ ತೆರಳುವ ಸಮಯ ಹಾಗೂ ಖರ್ಚು ಉಳಿಯಿತು ಎಂಬ ಖುಷಿಯೊಂದಿಗೆ ಮನೆಯಲ್ಲೇ ಹೆಚ್ಚು ಹೊತ್ತು ಕುಟುಂಬದವರ ಜೊತೆ ಕಳೆಯಬಹುದು ಎಂದುಕೊಂಡಿದ್ದೆಲ್ಲಾ ಕೆಲವೇ ದಿನಗಳಲ್ಲಿ ಸಾಕು ಎನಿಸುವಂತಾಗಿದೆ.

ಕಾರಣವಿಷ್ಟೇ, ಮನೆಯಲ್ಲೇ ಇರುವಾಗ ಏನಾಗಲೂ ತಿನ್ನಬೇಕು ಎನಿಸುವುದರಿಂದ ಮಹಿಳೆಯರಿಗೆ ಅಡುಗೆ ಮನೆಯಿಂದ ಮುಕ್ತಿ ದೊರೆಯುತ್ತಿಲ್ಲ. ದಿನಕ್ಕೊಂದು ಬಗೆ ತಿಂಡಿ ಮಾಡಿ ಮನೆಕೆಲಸದೊಂದಿಗೆ ಕಚೇರಿ ಕೆಲಸ ಮಾಡುವ ಅಮ್ಮಂದಿರಿಗೆ ಸಂಜೆಯಾಗುತ್ತಲೇ ಸಿಟ್ಟು ನೆತ್ತಿಗೇರತೊಡಗುತ್ತದೆ.

ಮಗು ವಸ್ತುಗಳನ್ನು ಕದಿಯುತ್ತಿದ್ದರೆ ನೀವು ಕೂಗಾಡುವ ಬದಲು ಈ ಸಮಸ್ಯೆಯನ್ನು ಈ ರೀತಿ ಪರಿಹರಿಸಿ

ಇದಕ್ಕೆ ಮನೆಮಂದಿಯೆಲ್ಲಾ ಕೈ ಜೋಡಿಸುವುದರ ಹೊರತು ಅನ್ಯ ಮಾರ್ಗಗಳಿಲ್ಲ. ಅಂದರೆ ಮನೆಯ ಸ್ವಚ್ಛಗೊಳಿಸುವಂಥ ಸಣ್ಣ ಪುಟ್ಟ ಕೆಲಸಗಳನ್ನು ಮಕ್ಕಳಿಗೆ ಹಂಚಿ. ಅಡುಗೆ ಮನೆಯಲ್ಲಿ ಕೈ ಜೋಡಿಸಲು ಪತಿಯನ್ನು ಒಪ್ಪಿಸಿ. ಹೀಗೆ ಒಬ್ಬರಿಗೊಬ್ಬರು ಕೆಲಸ ಹಂಚಿಕೊಂಡು ಮಾಡಿದರೆ ಮಾತ್ರ ಮನೆಯಲ್ಲೇ ಇರುವ ಖುಷಿಯನ್ನು ಆಚರಿಸಬಹುದು. ಇಲ್ಲವಾದರೆ ಕೆಲಸ ಹೊರೆಯಾಗುವುದು ನಿಶ್ಚಿತ.

Work from home stress can only be resolved by full family joining hands to do household chores


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...