Kannada Duniya

ಮಗುವಿಗೆ ಪಾಕೆಟ್ ಮನಿ ನೀಡುವ ಅಭ್ಯಾಸ ಒಳ್ಳೆಯದೇ?

ಕೆಲವು ಪೋಷಕರು ಮಕ್ಕಳಿಗೆ ತಿಂಗಳಿಗೆ ಪಾಕೆಟ್ ಮನಿ ನೀಡುತ್ತಾರೆ. ಮಕ್ಕಳು ತಮ್ಮ ತಿಂಗಳ ಖರ್ಚನ್ನು ಅದರಲ್ಲೇ ನಡೆಸಬೇಕಾಗುತ್ತದೆ. ಆದರೆ ಎಲ್ಲಾ ಪೋಷಕರು ಮಕ್ಕಳಿಗೆ ಪಾಕೆಟ್ ಮನಿ ಕೊಡುವುದಿಲ್ಲ. ಆದರೆ ಪಾಕೆಟ್ ಮನಿ ಕೊಡುವುದರಿಂದ ಮಕ್ಕಳಿಗೆ ಕೆಲವು ಪ್ರಯೋಜನಗಳಿವೆಯಂತೆ.

ಪೋಷಕರು ಮಕ್ಕಳಿಗೆ ಪಾಕೆಟ್ ಮನಿ ಕೊಡುವುದರಿಂದ ಅವರಿಗೆ ಹಣವನ್ನು ನಿರ್ವಹಿಸುವ ಉಪಾಯ ತಿಳಿಯುತ್ತದೆ. ಇದರಿಂದ ಅವರು ಹಣವನ್ನು ವ್ಯರ್ಥ ಖರ್ಚು ಮಾಡುವುದಿಲ್ಲ.

ಮಕ್ಕಳಿಗೆ ಪಾಕೆಟ್ ಮನಿ ಕೊಡುವುದರಿಂದ ಮಕ್ಕಳು ಹಣವನ್ನು ಉಳಿತಾಯ ಮಾಡುತ್ತಾರೆ. ಇದು ಮಕ್ಕಳ ಭವಿಷ್ಯಕ್ಕೆ ತುಂಬಾ ಒಳ್ಳೆಯದು. ಮುಂದಿನ ಜೀವನದಲ್ಲಿ ಅವರು ಯಶಸ್ಸನ್ನು ಸಾಧಿಸುತ್ತಾರೆ.

ಮಕ್ಕಳಿಗೆ ಪಾಕೆಟ್ ಮನಿ ಕೊಡುವುದರಿಂದ ಅವರು ಹಣಕ್ಕಾಗಿ ಕೆಟ್ಟ ದಾರಿ ಹಿಡಿಯುವುದನ್ನು ತಪ್ಪಿಸಬಹುದು. ಮತ್ತು ಅವರು ಹಣದ ಮೌಲ್ಯವನ್ನು ತಿಳಿದುಕೊಳ್ಳುತ್ತಾರೆ.

ಅಲ್ಲದೇ ಮಕ್ಕಳಿಗೆ ಪಾಕೆಟ್ ಮನಿ ಕೊಡುವುದರಿಂದ ಅವರಿಗೆ ಹಣವನ್ನು ಯಾವ ರೀತಿ ಬಳಸಿಕೊಳ್ಳಬೇಕು ಎಂಬ ಅರಿವು ಮೂಡುತ್ತದೆ. ಇದರಿಂದ ಅವರು ಜೀವನದಲ್ಲಿ ಎದುರಾದ ಆರ್ಥಿಕ ಸಮಸ್ಯೆಗಳನ್ನು ನಿವಾರಿಸಿಕೊಳ್ಳುತ್ತಾರೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...