Kannada Duniya

ಜೀವನದಲ್ಲಿ ಪ್ರಗತಿ ಹೊಂದಲು ಬಯಸಿದರೆ ಫೆಂಗ್ ಶೂಯಿ ಈ ಸಲಹೆ ಪಾಲಿಸಿ…!

ತಮ್ಮ ಜೀವನದಲ್ಲಿ ಪ್ರತಿಯೊಬ್ಬ ವ್ಯಕ್ತಿಯು ಯಶಸ್ವಿಯಾಗಲು ಮತ್ತು ಸಂತೋಷವಾಗಿರಲು ಬಯಸುತ್ತಾರೆ. ಇದಕ್ಕಾಗಿ ನಿರಂತರವಾಗಿ ಕೆಲಸ ಮಾಡುತ್ತಾರೆ. ಜೀವನದಲ್ಲಿ ಅನೇಕ ಕೆಲಸಗಳನ್ನು ಮಾಡುತ್ತೇವೆ. ಫೇಂಗ್ ಶೂಯಿಯ ನಿಯಮಗಳು ಮತ್ತು ಪರಿಹಾರಗಳನ್ನು ಅನುಸರಿಸಿದರೆ ಮನೆಯ ಎಲ್ಲಾ ನಕರಾತ್ಮಕ ಶಕ್ತಿ ನಿವಾರಣೆಯಾಗಿ ಸಕರಾತ್ಮಕ ಶಕ್ತಿ ಹೆಚ್ಚಾಗುತ್ತದೆ.

-ಫೆಂಗ್ ಶೂಯಿ ನಿಯಮಗಳ ಪ್ರಕಾರ, ಜೀವನದಲ್ಲಿ ಯಶಸ್ಸು ಪಡೆಯಲು ಗರುಡ ಹಕ್ಕಿಯ ಫೋಟೊವನ್ನು ಮನೆಯಲ್ಲಿ ಇರಿಸಬೇಕು. ಇದರಿಂದ ನಿಮ್ಮಲ್ಲಿ ಏಕಾಗ್ರತೆ ಹೆಚ್ಚಾಗುತ್ತದೆ. ಇದು ನಿಮ್ಮ ಗುರಿಯನ್ನು ಸಾಧಿಸಲು ಪ್ರೇರೆಪಿಸುತ್ತದೆ.

-ಫೆಂಗ್ ಶೂಯಿ ಪ್ರಕಾರ ನೀವು ಯಶಸ್ಸು ಮತ್ತು ಜನಪ್ರಿಯತೆಯನ್ನು ಸಾಧಿಸಲು ಬಯಸಿದರೆ ಮನೆಯಲ್ಲಿ ಕುದುರೆಯ ಫೋಟೊವನ್ನು ಇಡಬೇಕು. ಕುದುರೆ ಬೆಂಕಿಯನ್ನು ಪ್ರತಿನಿಧಿಸುತ್ತದೆ. ಇದು ನಿಮ್ಮ ಪ್ರಗತಿಗೆ ಕಾರಣವಾಗುತ್ತದೆ.

– ಫೆಂಗ್ ಶೂಯಿ ಪ್ರಕಾರ ಪರ್ವತದ ಚಿತ್ರವೊಂದು ನಿಮ್ಮ ಕಚೇರಿಯಲ್ಲಿ ನೀವು ಕುಳಿತುಕೊಳ್ಳುವ ಕುರ್ಚಿಯ ಹಿಂದೆ ಇರಬೇಕು. ಪರ್ವತ ಶಕ್ತಿಯ ಸಂಕೇತವಾಗಿದೆ, ಇದು ನಿಮ್ಮನ್ನು ಬಲಶಾಲಿಯನ್ನಾಗಿಸುತ್ತದೆ.

– ಫೆಂಗ್ ಶೂಯಿ ಪ್ರಕಾರ ಮೀನುಗಳು ತುಂಬಾ ಶುಭ. ಮೀನುಗಳು ಸಂಪತ್ತು ಮತ್ತು ಸಮೃದ್ಧಿಯನ್ನು ತರುತ್ತದೆ. ಇದು ನಮಗೆ ಜೀವನದಲ್ಲಿ ಅಪಾರ ಯಶಸ್ಸನ್ನು ನೀಡುತ್ತದೆ.

– ಫೆಂಗ್ ಶೂಯಿ ಪ್ರಕಾರ, ಮ್ಯಾಗ್ಪಿ ಫೋಟೊವನ್ನು ಮನೆಯಲ್ಲಿ ಹಾಕಿ, ಇದು ನಿಮಗೆ ಹೊಸ ಅವಕಾಶಗಳನ್ನು ನೀಡುತ್ತದೆ. ಇದು ನಿಮ್ಮ ವೃತ್ತಿ ಜೀವನದ ಯಶಸ್ಸಿನ ಬಾಗಿಲು ತೆರೆಯುತ್ತದೆ.

 

 


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...