Kannada Duniya

ಮನೆಯಲ್ಲಿ ಇರುವ ಮಕ್ಕಳನ್ನು ಈ ರೀತಿಯಾಗಿ ನೋಡಿಕೊಳ್ಳಿ

ಕೊರೊನಾ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚೆ ಆಗುತ್ತಿದೆ. ಇದೊಂದು ರೀತಿ ಮಾನಸಿಕವಾಗಿ ಎಲ್ಲರನ್ನೂ ಭಯಬೀಳಿಸುತ್ತಿದೆ. ಹೆಚ್ಚಾಗಿ ಮಕ್ಕಳ ಮನಸ್ಸಿನ ಮೇಲೂ ಇದು ಹೆಚ್ಚಿನ ಒತ್ತಡವನ್ನುಂಟು ಮಾಡುತ್ತಿದೆ. ಶಾಲೆಗೆ ಹೋಗಿ ಆಟ-ಪಾಠ ಕಲಿಯುವ ಸಮಯದಲ್ಲಿ ಮಕ್ಕಳು ಈಗ ಮನೆಯ ನಾಲ್ಕು ಗೋಡೆಯೊಳಗೆ ಬಂಧಿಯಾಗಿದ್ದಾರೆ. ಇದರಿಂದ ಅವರು ಮೊಬೈಲ್, ಹಾಗೂ ಟಿವಿಗೆ ಹೆಚ್ಚು ಹತ್ತಿರವಾಗುತ್ತಿದ್ದರೆ ಮಕ್ಕಳನ್ನು ಇದರಿಂದ ಹೊರಗೆ ತರುವುದಾದರೂ ಹೇಗೆ ಎಂಬುದೇ ಪೋಷಕರ ಚಿಂತೆಯಾಗಿದೆ.

ಮಕ್ಕಳ ಕೈಯಲ್ಲಿ ಫೋನ್ ಕೊಟ್ಟಿದ್ದೀರಾ…?

-ಆದಷ್ಟು ಮಕ್ಕಳಿಗೆ ಕೊರೊನಾದ ಬಗ್ಗೆ ತಿಳಿಸಿ ಹೇಳಿ. ಹೊರಗಡೆ ಹೋಗುವುದರಿಂದ ಆಗುವ ಅಪಾಯದ ಕುರಿತು ಅವರಿಗೆ ಮೊದಲು ತಿಳಿವಳಿಕೆ ಮೂಡಿಸಿ.

-ಇನ್ನು ನೀವು ಕೂಡ ಅವರ ಜತೆ ಬೆರೆಯಿರಿ. ಮನೆಯ ಹೊರಗಡೆ ಜಾಗವಿದ್ದರೆ ಅಲ್ಲಿಯೇ ಯಾವುದಾದರೂ ಆಟವಾಡುವುದು ಅವರೊಂದಿಗೆ ಕುಳಿತು ಮಾತನಾಡುವುದನ್ನು ಮಾಡಿ.

-ಇನ್ನು ಮನೆಯ ಟೇರೆಸ್ ಅಥವಾ ಹಿತ್ತಲಿನಲ್ಲಿ ಗಿಡ ನೆಡುವುದಕ್ಕೆ ಮಕ್ಕಳಿಗೆ ಹೇಳಿ ಕೊಡಿ. ಆ ಗಿಡದ ಆರೈಕೆಯ ಬಗ್ಗೆ ಅವರಿಗೆ ಅರಿವು ಮೂಡಿಸಿ. ಇದರಿಂದ ಅವರಿಗೆ ಟೈಂಪಾಸ್ ಆಗುತ್ತದೆ. ಜತೆಗೆ ಗಿಡದೊಂದಿಗೆ ಅವರ ಒಡನಾಟ ಜಾಸ್ತಿ ಆಗುತ್ತದೆ.

-ನೀವು ಕೂಡ ಮೊಬೈಲ್ , ಟೀವಿಯಿಂದ ದೂರವಿದ್ದು ಆದಷ್ಟು ಒಳ್ಳೊಳ್ಳೆಯ ಪುಸ್ತಕವನ್ನು ಈ ಸಮಯದಲ್ಲಿ ಓಡಿ. ನಿಮ್ಮನ್ನು ನೋಡಿ ಮಕ್ಕಳು ಕೂಡ ಓದುವ ಅಭ್ಯಾಸ ಬೆಳೆಸಿಕೊಳ್ಳುತ್ತಾರೆ.

-ಅಡುಗೆ ಕೆಲಸ, ಮನೆಕೆಲಸವನ್ನು ಮಕ್ಕಳಿಗೆ ಹೇಳಿಕೊಡಿ. ಪರಿಸ್ಥಿತಿ ಹೇಗೆ ಬರುತ್ತದೆಯೋ ಎಂದು ಗೊತ್ತಿಲ್ಲ. ಅವರಿಗೆ ಅಡುಗೆಯ ಬಗ್ಗೆ ತಿಳಿದಿದ್ದರೆ ಒಳ್ಳೆಯದು.

-ಮನೆಯಲ್ಲಿ ಸಂಜೆ ಹೊತ್ತು ಭಜನೆ, ದೇವರ ನಾಮಗಳನ್ನು ಹೇಳಿ. ಇದು ಸಕಾರಾತ್ಮಕ ವಾತಾವರಣವನ್ನು ಮನೆಯಲ್ಲಿ ಉಂಟು ಮಾಡುತ್ತದೆ.

Tips to keep kids at home busy without gadgets


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...