Kannada Duniya

ಮಕ್ಕಳ ಕೈಯಲ್ಲಿ ಫೋನ್ ಕೊಟ್ಟಿದ್ದೀರಾ…?

ಈಗ ಶಾಲೆಯಂತೂ ಇಲ್ಲ. ಆನ್ ಲೈನ್ ತರಗತಿಗಳು ಇರುವುದರಿಂದ ತಾಯಂದಿರ ಪೋನ್ ಮಕ್ಕಳ ಕೈಯಲ್ಲಿಯೇ ಇರುತ್ತದೆ. ಇನ್ನು ಕೆಲವರು ಮಕ್ಕಳ ಓದಿಗೆ ತೊಂದರೆಯಾಗಬಾರದು ಎಂದು ಅವರಿಗೆಂದೇ ಹೊಸ ಫೋನ್ ತಂದು ಕೊಟ್ಟಿರುತ್ತಾರೆ. ಆದರೆ ಇದೆಷ್ಟು ಸೇಫ್…?
ಬೆಳೆಯುವ ಮಕ್ಕಳ ಕೈಯಲ್ಲಿ ಮೊಬೈಲ್ ಇದ್ದರೆ ಅವರು ಬೇಗನೆ ಸಾಮಾಜಿಕ ಜಾಲತಾಣದತ್ತ ಆಕರ್ಷಿರಾಗುತ್ತಾರೆ. ಇದರಿಂದ ಸಾಕಷ್ಟು ತೊಂದರೆ ಕೂಡ ಎದುರಾಗಬಹುದು. ಇದನ್ನು ಸುಲಭವಾಗಿ ಬಗೆಹರಿಸುವ ಬಗೆ ಇಲ್ಲಿದೆ ಒಂದಷ್ಟು ಮಾಹಿತಿ.
ಆನ್ ಲೈನ್ ಕ್ಲಾಸ್ ಅಗತ್ಯವಾಗಿರುವುದರಿಂದ ಮಕ್ಕಳಿಗೆ ಮೊಬೈಲ್ ಕೊಡುವುದು ಅನಿವಾರ್ಯವಾಗಿದೆ. ಆದರೆ ಕೊಡುವ ಮೊದಲು ಅವರಿಗೆ ಈ ಸಾಮಾಜಿಕ ಜಾಲತಾಣದ ಕುರಿತು ಒಂದಷ್ಟು ಮಾಹಿತಿ ನೀಡಿ. ಅದರ ಒಳಿತು ಕೆಡುಕಿನ ಬಗ್ಗೆಯೂ ತಿಳಿಸಿ ಹೇಳಿ.
ಇನ್ನು ಫೇಸ್ ಬುಕ್ , ಇನ್ ಸ್ಟಾ ಗ್ರಾಂನಲ್ಲಿ ಅಪರಿಚಿತರಿಗೆ ಯಾವುದೇ ಮಾಹಿತಿ ನೀಡದಂತೆ ಎಚ್ಚರಿಕೆ ವಹಿಸಿ. ಇದರಿಂದ ಮುಂದೆ ಆಗುವ ತೊಂದರೆ ಬಗ್ಗೆ ಅವರಿಗೆ ತಿಳಿಹೇಳಿ.
ಇನ್ನು ಮಕ್ಕಳ ಕೈಗೆ ಫೋನ್ ಕೊಟ್ಟು ನೀವು ಇನ್ನೇನು ಕೆಲಸ ಮಾಡುತ್ತಾ ಕುಳಿತುಕೊಳ್ಳಬೇಡಿ. ಅವರು ಏನು ಮಾಡಿದ್ರು, ಯಾರ ಜತೆ ಚಾಟ್ ಮಾಡಿದ್ರು ಎಂಬುದರ ಬಗ್ಗೆ ಕೇಳಿ. ಜೋರು ಮಾಡಿ ಕೇಳುವುದಕ್ಕಿಂತ ಅವರ ಜತೆ ನಿಧಾನಕ್ಕೆ ಕುಳಿತು ಮಾತನಾಡಿ.
ಮೊಬೈಲ್ ನ ಪಾಸ್ ವರ್ಡ್ ಗಳನ್ನು ಯಾರ ಜತೆಯೂ ಹಂಚಿಕೊಳ್ಳದಂತೆ ಅವರಿಗೆ ಎಚ್ಚರಿಕೆ ವಹಿಸಿ.

This article give idea what all precautions we need to take care before giving cell phone to kids


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...