Kannada Duniya

ಖಾಸಗಿ ಬದುಕು ಸೋಷಿಯಲ್ ಮೀಡಿಯಾದಿಂದ ದೂರವಿರಲಿ!

ಇಂದಿನ ಜಮಾನವಂತೂ ಸೋಷಿಯಲ್ ಮೀಡಿಯಾಗೆ ಎಷ್ಟೊಂದು ಹೊಂದಿಕೊಂಡಿದೆ ಎಂದರೆ ಬೆಳಗಿನ ವಾಕಿಂಗ್ ನಿಂದ ಹಿಡಿದು ರಾತ್ರಿಯ ಊಟದ ತನಕ ಪ್ರತಿಯೊಂದನ್ನೂ ಹಂಚಿಕೊಳ್ಳುವ, ಪೋಸ್ಟ್ ಮಾಡುವ ಪ್ರವೃತ್ತಿ ಬೆಳೆಯುತ್ತಿದೆ. ಯಾವುದನ್ನೂ ಖಾಸಗಿಯಾಗಿಡುವ ಅನಿವಾರ್ಯತೆ ಕಾಣಿಸುತ್ತಿಲ್ಲ.

ವೈಯಕ್ತಿಕ ಜೀವನದ ವಿವರಗಳನ್ನು ಪ್ರೈವೇಟ್ ಆಗಿ ಇಡುವುದು ಮುಖ್ಯ ಎನ್ನುತ್ತಾರೆ ಮನಶ್ಯಾಸ್ತ್ರಜ್ಞರು. ಏಕೆಂದರೆ ನೀವು ಸಂಪರ್ಕ ಹೊಂದಿರುವ ಎಲ್ಲರೂ ನಿಮ್ಮ ಸ್ನೇಹಿತರಾಗಲು ಸಾಧ್ಯವಿಲ್ಲ. ಖಾಸಗಿ ವಿಚಾರಗಳನ್ನು ವಿವೇಚನಾರಹಿತವಾಗಿ ಹಂಚಿಕೊಳ್ಳುವುದರಿಂದ ನಿಮ್ಮ ಬಗ್ಗೆ ಅವರಲ್ಲಿ ಕೆಟ್ಟ ಭಾವನೆ ಮೂಡಬಹುದು.

ಎಲ್ಲವನ್ನೂ ಪ್ರತಿಯೊಬ್ಬರ ಬಳಿ ಹೇಳಿಕೊಳ್ಳುವ ಅವಶ್ಯಕತೆ ಇದೆಯೇ ಎಂಬುದನ್ನು ಆಲೋಚಿಸಿ. ಸೋಷಿಯಲ್ ಮೀಡಿಯಾದಲ್ಲಿ ನಿಮ್ಮ ಶತ್ರುಗಳೂ ಇರಬಹುದು ಎಂಬುದನ್ನು ಮರೆಯದಿರಿ.

ಇನ್ನೂ ಕೆಲವರು ಸೋಷಿಯಲ್ ಮೀಡಿಯಾಗಳ ಪೋಸ್ಟ್ ಅನ್ನು ನೋಡಿಯೇ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ತಾವು ಏನಾದರೂ ಮಾಡಿದ್ದರೆ ಅದಕ್ಕೂ ವಿವರಣೆ ನೀಡುತ್ತಾರೆ. ಇದರಿಂದ ನೆಮ್ಮದಿ ಹಾಳಾಗುತ್ತದೆಯೇ ಹೊರತು ಬದುಕಿಗೆ ಯಾವುದೇ ಪ್ರಯೋಜನ ದೊರೆಯುವುದಿಲ್ಲ.

 


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...