Kannada Duniya

ದೇವಸ್ಥಾನದಿಂದ ಹಿಂದಿರುಗುವಾಗ ಕಲಶಕ್ಕೆ ಸಂಬಂಧಿಸಿದ ಈ ತಪ್ಪು ಮಾಡಬೇಡಿ

ಪ್ರತಿದಿನ ಎಲ್ಲರೂ ದೇವರಿಗೆ ಪೂಜೆಯನ್ನು ಮಾಡುತ್ತಾರೆ. ಕೆಲವರು ಮನೆಯಲ್ಲಿಯೇ ದೇವರನ್ನು ಪೂಜಿಸಿದರೆ ಇನ್ನೂ ಕೆಲವರು ಪ್ರತಿದಿನ ದೇವಸ್ಥಾನಕ್ಕೆ ತೆರಳಿ ದೇವರ ಪೂಜೆ ಮಾಡಿಸುತ್ತಾರೆ. ಹಾಗೇ ಕೆಲವರು ದೇವರ ಪೂಜೆಗೆ ನೀರನ್ನು, ಹಾಲನ್ನು ತೆಗೆದುಕೊಂಡು ಹೋಗುತ್ತಾರೆ. ಆದರೆ ಮರಳಿ ಬರುವಾಗ ಕಲಶವನ್ನು ಈ ರೀತಿ ತರಬೇಡಿ.

ನೀವು ದೇವಸ್ಥಾನದಿಂದ ಕಲಶವನ್ನು ಖಾಲಿಯಾಗಿ ತರಬೇಡಿ. ಹಾಗೇ ಮಾಡುವುದರಿಂದ ವ್ಯಕ್ತಿ ಜೀವನದಲ್ಲಿ ಅನೇಕ ಅಡೆತಡೆಗಳನ್ನು ಅನುಭವಿಸುತ್ತಾನೆ.

ಹಾಗಾಗಿ ಕಲಶ ಖಾಲಿಯಾಗಿದ್ದರೆ ಅದರಲ್ಲಿ ತೀರ್ಥವನ್ನು ಅಥವಾ ದೇವರ ಅಭಿಷೇಕದ ನೀರನ್ನು ತೆಗೆದುಕೊಂಡು ಬನ್ನಿ. ಇದರಿಂದ ಒಳ್ಳೆಯದಾಗುತ್ತದೆಯಂತೆ.

ಹಾಗೇ ದೇವಸ್ಥಾನದಿಂದ ತಂದ ಕಲಶದ ನೀರನ್ನು ಮನೆಗೆ ಬಂದ ಮೇಲೆ ಹೊರಗೆ ಚೆಲ್ಲಬೇಡಿ. ಬದಲಾಗಿ ಅದನ್ನು ಇಡೀ ಮನೆಗೆ ಸಿಂಪಡಿಸಿ. ಇದರಿಂದ ಮನೆಯಲ್ಲಿರುವ ನಕರಾತ್ಮಕ ಶಕ್ತಿಗಳು ಓಡಿಹೋಗುತ್ತವೆ. ಇದರಿಂದ ಮನೆಯಲ್ಲಿ ಸುಖ, ಶಾಂತಿ ನೆಮ್ಮದಿ ನೆಲೆಸುತ್ತದೆಯಂತೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...