Kannada Duniya

ಯಾರಾದರೂ ನಿಮ್ಮ ಬಗ್ಗೆ ಕೆಟ್ಟದಾಗಿ ಮಾತನಾಡಿದರೆ ಅದಕ್ಕೆ ನಿಮ್ಮ ಪ್ರತಿಕ್ರಿಯೆ ಹೀಗಿರಲಿ

ಕೆಲವು ಜನರಿಗೆ ಬೇರೆಯವರ ಬಗ್ಗೆ ಕಾಮೆಂಟ್ ಮಾಡುವುದೇ ಕೆಲಸವಾಗಿರುತ್ತದೆ. ಜನರು ನಿಮ್ಮ ಬಗ್ಗೆ ಕಾಮೆಂಟ್ ಮಾಡಿದಾಗ ನಿಮಗೆ ಕೋಪ ಬರುವುದು ಸಹಜ. ಆದರೆ ಇದರಿಂದ ಸಮಸ್ಯೆ ಮತ್ತಷ್ಟು ಹೆಚ್ಚಾಗುತ್ತದೆ. ಹಾಗಾಗಿ ಅದನ್ನು ಹೀಗೆ ಸರಿಪಡಿಸಿಕೊಳ್ಳಿ.

ಕೆಟ್ಟ ಕಾಮೆಂಟ್ ಗಳಿಗೆ ಶಾಂತವಾಗಿ ಪ್ರತಿಕ್ರಿಯಿಸಿ. ಇದು ಉತ್ತಮ ಮಾರ್ಗವಾಗಿದೆ. ಇದು ನಿಮ್ಮ ಘನತೆಯನ್ನು ಕಾಪಾಡುತ್ತದೆ.

ನಿಮ್ಮ ಬಗ್ಗೆ ಯಾರಾದರೂ ಕೆಟ್ಟ ಕಾಮೆಂಟ್ ಮಾಡಿದರೆ ಅದರ ಹಿಂದಿನ ಉದ್ದೇಶವನ್ನು ಮೊದಲು ತಿಳಿದುಕೊಳ್ಳಿ. ಇದಕ್ಕೆ ಪ್ರತಿಕ್ರಿಯಿಸಬೇಕೆ ಅಥವಾ ನಿರ್ಲಕ್ಷಿಸಬೇಕೆ ಎಂಬುದನ್ನು ತಿಳಿಯಿರಿ.

ಯಾವುದೇ ಕೆಟ್ಟ ಕಾಮೆಂಟ್ ಗಳಿಗೆ ಹಾಸ್ಯದ ಮೂಲಕ ಉತ್ತರ ನೀಡುವುದು ಹೆಚ್ಚು ಸೂಕ್ತ. ಇದು ವ್ಯಕ್ತಿಗೆ ಬಹಳ ಬೇಗನೆ ಅರ್ಥವಾಗುವಂತೆ ಮಾಡುತ್ತದೆ ಮತ್ತು ಇದರಿಂದ ಯಾವುದೇ ಜಗಳ ನಡೆಯುವುದಿಲ್ಲ.

ಯಾರಾದರೂ ವ್ಯಕ್ತಿ ನಿಮ್ಮ ಬಗ್ಗೆ ಕೆಟ್ಟ ಕಾಮೆಂಟ್ ಮಾಡಿದರೆ ಅವರನ್ನು ನಿರ್ಲಕ್ಷ್ಯ ಮಾಡಿ. ಮತ್ತೆ ಅವರನ್ನು ನಿಮ್ಮ ಜೀವನದಲ್ಲಿ ಬರಲು ಬಿಡಬೇಡಿ.

ನೀವು ಯಾವುದೇ ಕಾಮೆಂಟ್ ಗಳಿಗೆ ಕೋಪಿಸಿಕೊಳ್ಳುವ ಬದಲು ಮೌನದಿಂದಿರಿ. ಕೆಲವೊಮ್ಮೆ ಮೌನ ಕೂಡ ಪ್ರಬಲ ಹೇಳಿಕೆಯಾಗಿರುತ್ತದೆ


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...