Kannada Duniya

ನಿಮ್ಮ ಮನಸ್ಸನ್ನು ಕೆಡಿಸುವಂತಹ ಈ ಜನರಿಂದ ಯಾವಾಗಲೂ ದೂರವಿರಿ

ಪ್ರತಿಯೊಬ್ಬರ ಜೀವನದ ಮೇಲೆ ಸುತ್ತಮುತ್ತಲಿನ ಜನರು ಹೆಚ್ಚು ಪ್ರಭಾವ ಬೀರುತ್ತಾರೆ. ಹಾಗಾಗಿ ನಾವು ಉತ್ತಮ ಜನರೊಂದಿಗೆ ಸಂಗ ಮಾಡಬೇಕು. ಕೆಲವು ಜನರು ನಮ್ಮ ಮನಸ್ಸಿನ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಇದರಿಂದ ನಮ್ಮ ಮನಸ್ಸಿನ ನೆಮ್ಮದಿ ಕೆಡುತ್ತದೆ. ಹಾಗಾಗಿ ಇಂತಹ ಜನರಿಂದ ದೂರವಿರಿ.

ಜೀವನದಲ್ಲಿ ಯಾವಾಗಲೂ ನಕರಾತ್ಮಕತೆಯನ್ನು ತರುವಂತಹ ಜನರಿಂದ ದೂರವಿರಿ. ಅಂತಹ ಜನರು ಯಾವಾಗಲೂ ನಿಮ್ಮನ್ನು ಟೀಕಿಸುತ್ತಾರೆ. ಇವರಿಂದ ನಿಮ್ಮ ಮಾನಸಿಕ ನೆಮ್ಮದಿ ಹಾಳಾಗುತ್ತದೆ.ಹಾಗಾಗಿ ಇವರಿಂದ ದೂರವಿರಿ.

ಹಾಗೇ ಯಾವಾಗಲೂ ನಿಮ್ಮ ಮೇಲೆ ಪ್ರಾಬಲ್ಯ ಬೀರುವ ಮನುಷ್ಯರಿಂದ ದೂರವಿರಿ. ಇವರು ಯಾವಾಗಲೂ ನಿಮ್ಮ ಇಚ್ಛೆಗೆ ವಿರುದ್ಧವಾಗಿ ನಡೆದುಕೊಳ್ಳುತ್ತಾರೆ. ಇವರು ನಿಮ್ಮನ್ನು ನಿಯಂತ್ರಿಸಲು ಪ್ರಯತ್ನಿಸುತ್ತಾರೆ. ಹಾಗಾಗಿ ಇಂತವರಿಂದ ದೂರವಿರಿ.

ಅಲ್ಲದೇ ಯಾವಾಗಲೂ ಸುಳ್ಳು ಹೇಳುವಂತಹ ವ್ಯಕ್ತಿಗಳಿಂದ ದೂರವಿರಿ. ಇವರು ನಿಮ್ಮ ಮನಸ್ಸಿನ ಶಾಂತಿಯನ್ನು ಹಾಳು ಮಾಡುತ್ತಾರೆ. ಹಾಗೇ ಇವರಿಂದ ನಿಮ್ಮ ಮರ್ಯಾದೆಗೆ ಧಕ್ಕೆಯಾಗಬಹುದು. ಹಾಗಾಗಿ ಅಂತವರಿಂದ ದೂರವಿರಿ.

ಹಾಗೇ ಅಹಂಕಾರಿ ಜನರಿಂದ ದೂರವಿರಿ. ಇವರು ಯಾವಾಗಲೂ ತಮ್ಮದೇ ಸರಿ ಎಂದು ವಾದಿಸುತ್ತಾರೆ. ಇವರು ನಿಮ್ಮನ್ನು ಯಾವಾಗಲೂ ನೋಯಿಸುತ್ತಿರುತ್ತಾರೆ. ಹಾಗಾಗಿ ಇಂತವರಿಂದ ದೂರವಿರಿ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...