Kannada Duniya

ಪುರುಷರೇ ತುಸು ಇಲ್ಲಿ ಕೇಳಿ… ನಿಮ್ಮ ಮನಸ್ಸು ಬಿಚ್ಚಿ ಮಾತನಾಡಿ!

ಮಹಿಳೆಯರು ತಮ್ಮ ಮನಸ್ಸಿನ ಮಾತುಗಳನ್ನು ಇನ್ನೊಬ್ಬರ ಬಳಿ ಹೇಳಿಕೊಂಡು ಹಗುರಾಗುತ್ತಾರೆ. ಆ ಕಲೆ ಪುರುಷರಿಗೆ ಒಲಿದಿಲ್ಲ. ತನ್ನ ಮನಸ್ಸಿನ ಭಾವನೆಗಳನ್ನು ಅತ್ಮೀಯರ ಬಳಿಯೂ ಅವರು ಹಂಚಿಕೊಳ್ಳುವುದಿಲ್ಲ. ಇದಕ್ಕೆ ಸಾಮಾಜಿಕ, ಸಾಂಸ್ಕೃತಿಕ ಮತ್ತು ವೈಯಕ್ತಿಕ ಕಾರಣಗಳಿವೆ ಎಂದು ತಜ್ಞರು ಅಭಿಪ್ರಾಯ ಪಡುತ್ತಾರೆ.

ಪುರುಷರು ಕಲ್ಲಿನಂತೆ ಗಟ್ಟಿ ಎಂದು ಸಮಾಜದಲ್ಲಿ ಬಿಂಬಿತವಾಗಿದ್ದರಿಂದ, ಎಲ್ಲರ ಮುಂದೆ ಭಾವನೆಗಳನ್ನು ಹಂಚಿಕೊಂಡಾಗ ತಾನು ಎಲ್ಲಿ ದುರ್ಬಲನಾಗಿ ಕಾಣುತ್ತೇನೋ ಎಂಬ ಭೀತಿ ಅವರನ್ನು ಕಾಡುತ್ತದೆ. ಅದಕ್ಕಾಗಿ ಎಲ್ಲಾ ಸಂಗತಿಗಳನ್ನು ಮನಸ್ಸಿನಲ್ಲೇ ಇಟ್ಟುಕೊಳ್ಳುತ್ತಾರೆ.

ಅದರ ಬದಲು ಮುಕ್ತವಾಗಿ ಮಾತನಾಡಿದರೆ ಮನಸ್ಸಿನ ಒತ್ತಡ ಕಡಿಮೆಯಾಗುತ್ತದೆ. ಭಾವನೆಗಳನ್ನು ಆರೋಗ್ಯಕರ ರೀತಿಯಲ್ಲಿ ವ್ಯಕ್ತಪಡಿಸುವುದರಿಂದ ಖಿನ್ನತೆ ಮೊದಲಾದ ಸಮಸ್ಯೆಗಳಿಂದಲೂ ಹೊರಬರಬಹುದು.

ಹಾಗಾಗಿ ಪುರುಷರ ಭಾವನೆಗಳನ್ನು ಮುಕ್ತವಾಗಿ ಹಂಚಿಕೊಳ್ಳುವಂತೆ ಅವರನ್ನು ಪ್ರೇರೇಪಿಸುವುದು ಮುಖ್ಯ. ನಿಮ್ಮ ಬಳಿ ಹಂಚಿಕೊಳ್ಳುವುದರಿಂದ ಅದು ಬೇರಾರಿಗೂ ತಿಳಿಯುವುದಿಲ್ಲ ಹಾಗೂ ಹಾಸ್ಯಾಸ್ಪದವಾಗದು ಎಂಬ ಭರವಸೆ ದೊರೆತಾಗ ಮಾತ್ರ ಅವರ ಮನಸ್ಸಿನ ಭಾವನೆಗಳು ಹೊರಬರಬಹುದು.

 


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...