Kannada Duniya

ಪುರುಷರ ಫಲವತ್ತತೆಯನ್ನು ಹೆಚ್ಚಿಸಲು ಅಮೃತಬಳ್ಳಿ ಸಹಕಾರಿಯೇ?

ಕೆಲವು ದಂಪತಿಗಳಿಗೆ ಮದುವೆಯಾಗಿ ಹಲವು ವರ್ಷಗಳೇ ಕಳೆದರೂ ಮಕ್ಕಳಾಗುವುದಿಲ್ಲ ಇದಕ್ಕೆ ಅವರ ಫಲವತ್ತತೆ ಉತ್ತಮವಾಗಿಲ್ಲದಿರುವುದೇ ಕಾರಣವಾಗಿದೆ. ಹಾಗಾಗಿ ಪುರುಷರು ತಮ್ಮ ಫಲವತ್ತತೆಯನ್ನು ಹೆಚ್ಚಿಸಲು ಅಮೃತ ಬಳ್ಳಿಯನ್ನು ಸೇವಿಸಬಹುದೇ? ಎಂಬುದನ್ನು ತಿಳಿಯಿರಿ.

ಅಮೃತಬಳ್ಳಿ ಒಂದು ಗಿಡಮೂಲಿಕೆಯಾಗಿದೆ. ಇದು ಪುರುಷರ ಫಲವತ್ತತೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದು ಪುರುಷರ ವೀರ್ಯಾಣು ಸಂಖ್ಯೆಯನ್ನು ಹೆಚ್ಚಿಸುತ್ತದೆ. ಇದರಿಂದ ಅವರ ಸಂಗಾತಿ ಗರ್ಭ ಧರಿಸಲು ಸಹಕಾರಿಯಾಗಿದೆ. ಅಲ್ಲದೇ ಪುರುಷರು ಅಮೃತಬಳ್ಳಿಯನ್ನು ಸೇವಿಸುವುದರಿಂದ ಅವರ ವೀರ್ಯದ ಗುಣಮಟ್ಟ ಕೂಡ ಹೆಚ್ಚಾಗುತ್ತದೆ.

ಇದನ್ನು ನಿಯಮಿತವಾಗಿ ಸೇವಿಸುವುದರಿಂದ ಪುರುಷರಲ್ಲಿ ದೈಹಿಕ ಸಾಮರ್ಥ್ಯ ಹೆಚ್ಚಾಗುತ್ತದೆ. ಇದು ಮನಸ್ಸನ್ನು ಶಾಂತಗೊಳಿಸುತ್ತದೆ. ಮಾನಸಿಕ ಸಮಸ್ಯೆಗಳನ್ನು ದೂರಮಾಡುತ್ತದೆ. ಅಲ್ಲದೇ ಇದು ಪುರುಷರಲ್ಲಿ ಲೈಂಗಿಕ ಹಾರ್ಮೋನ್ ಟೆಸ್ಟೋಸ್ಟೆರಾನ್ ಅನ್ನು ಹೆಚ್ಚಿಸುತ್ತದೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...