Kannada Duniya

ಮದುವೆ ಎಂದರೆ ಹುಡುಗರಿಗೆ ಭಯವಂತೆ!

ಗಂಡುಮಕ್ಕಳು ಪ್ರಾಯಕ್ಕೆ ಬಂದಾಗ ಮದುವೆ ಮಾಡುವುದು ಸಹಜ.ಆದರೆ ಈಗಿನ ಹುಡುಗರು ಮದುವೆಯೆಂದರೆ ಯಾಕೋ ಭಯಭೀತರಾಗುತ್ತಾರಂತೆ. ಮದುವೆಯಾಗಿರುವ ಹಲವರನ್ನು ನೋಡಿ ಅವರು ಜೀವನದಲ್ಲಿ ಖುಷಿಯಾಗಿಲ್ಲ ಎಂಬುದು ಅವರ ಭಯವನ್ನು ಹೆಚ್ಚಿಸುತ್ತದಂತೆ.ಇನ್ನು ಮದುವೆಯ ನಂತರ ಜವಾಬ್ದಾರಿಗಳು ಅವರನ್ನು ಮದುವೆಯೆಂದರೆ ಮೂಗು ಮುರಿಯುವ ಹಾಗೇ ಮಾಡಿದೆಯಂತೆ.

ಬಹಳಷ್ಟು ಪುರುಷರಿಗೆ ಕಮಿಟ್ ಮೆಂಟ್ ಎಂದರೆ ಬಲುಕಷ್ಟವಂತೆ. ಸಂಗಾತಿಯಿಂದಲೂ ಇದನ್ನೇ ನಿರೀಕ್ಷೆ ಮಾಡುತ್ತಾರಂತೆ. ಇದು ಮನಸ್ಸಿಗೆ ವಿಪರೀತ ಹಿಂಸೆ ಎನಿಸುತ್ತದೆ. ಹಾಗಾಗಿ ಮದುವೆ ಎಂಬ ಪರಿಕಲ್ಪನೆಯೇ ಹುಡುಗರಿಗೆ ಭಯ ಹುಟ್ಟಿಸುತ್ತದಂತೆ.

ಫ್ರೀ ಮೈಂಡ್ ನಲ್ಲಿ ಬದುಕಬೇಕು ಎನ್ನುವವರು ಜವಾಬ್ದಾರಿಗಳನ್ನು ತೆಗೆದುಕೊಳ್ಳಲು ಹಿಂದೇಟು ಹಾಕುತ್ತಾರಂತೆ. ಮದುವೆ ಎಂಬ ವಿಚಾರ ಜವಾಬ್ದಾರಿಗಳನ್ನು ಹೆಗಲ ಮೇಲೆ ಹೊರಿಸುತ್ತದೆ ಎಂದು ಅವರು ನಂಬುತ್ತಾರಂತೆ.

ಮದುವೆಗೆ ಮುಂಚೆ ಇದ್ದ ಜೀವನ ಬಳಿಕ ಇರುವುದಿಲ್ಲ. ಹಾಗಾಗಿ ಮದುವೆ ಎಂಬುದು ತಮ್ಮನ್ನು ಕಟ್ಟಿ ಹಾಕುವ ಹಗ್ಗ ಎಂದುಕೊಳ್ಳುತ್ತಾರೆ. ತಮಗೆ ಇಷ್ಟವಾದ ಹಾಗೆ ಜೀವನ ನಡೆಸಲು ಮದುವೆಯ ನಂತರ ಸಾಧ್ಯವಾಗುವುದಿಲ್ಲ. ಹಾಗಾಗಿ ಮದುವೆಯೇ ಬೇಡ ಎಂಬ ನಿರ್ಧಾರಕ್ಕೆ ಬಂದು ಬಿಡುತ್ತಾರಂತೆ.

 


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...