Kannada Duniya

ಮದುವೆ ವೈಫಲ್ಯ: ಒಶೋ ವಿಶ್ಲೇಷಣೆ

ಮದುವೆ ಎಂದರೆ ಮಾರು ದೂರ ಓಡುವವರು ಇಲ್ಲಿ ಕೇಳಿ. ಮಹಾನ್ ದಾರ್ಶನಿಕನಾಗಿದ್ದ ಓಶೋ ರಜನೀಶ್ ಒಮ್ಮೆ ಮದುವೆಯೆಂಬ ವ್ಯವಸ್ಥೆಯಿಂದಲೇ ಸಮಸ್ಯೆಗಳು ಹೆಚ್ಚುತ್ತವೆ ಎಂದು ಹೇಳಿದ್ದರು.

ಓಶೋ ಪ್ರಕಾರ ಮದುವೆ ವಿಫಲವಾಗಲು ಹಲವು ಕಾರಣಗಳಿವೆ. ಭಾರತೀಯರು ಮದುವೆ ಅನ್ನುವುದನ್ನು ಆದರ್ಶ ಎಂಬಂತೆ ಪರಿಗಣಿಸಿದ್ದೇವೆ. ಆದರೆ ವಾಸ್ತವ ಹಾಗಿರುವುದಿಲ್ಲ. ಈ ಕಲ್ಪನೆಗಳು ಕೈಗೊಟ್ಟಾಗ ಅತೀವ ನೋವಾಗುತ್ತದೆ ಹಾಗೂ ವಿವಾಹದ ವಿಫಲತೆಗೆ ಕಾರಣವಾಗುತ್ತದೆ.

ನಮ್ಮ ಕಟ್ಟುಪಾಡುಗಳಿಗೆ ಸಿಕ್ಕಿದ ವಿವಾಹ ಎಂಬ ಪರಿಕಲ್ಪನೆ ಬದುಕನ್ನು ಸ್ವರ್ಗವಾಗಿಸುವ ಬದಲು ನರಕವಾಗಿಸುತ್ತದೆ. ಈ ಪರಿಕಲ್ಪನೆಯ ಹಿಂದಿರುವ ಉದ್ದೇಶ ಒಳ್ಳೆಯದೇ ಆಗಿದ್ದರೂ ಅರ್ಥಸಿಕೊಳ್ಳುವಲ್ಲಿ ನಾವು ಎಡವುತ್ತೇವೆ. ಇದು ಎಲ್ಲವನ್ನೂ ಬುಡಮೇಲು ಮಾಡಿಬಿಡುತ್ತದೆ.

ಆತ್ಮಸಂಗಾತಿ ಎಂಬುದು ಹಳೆ ಸ್ವರೂಪದ ಹೊಸ ಭಾಷೆ. ಮನುಷ್ಯ ತಾನು ಏನನ್ನು ಬದಲಾಯಿಸಲು ಸಾಧ್ಯವಿಲ್ಲವೋ ಅದಕ್ಕೆ ಹೊಸ ಹೆಸರು ಕೊಡುತ್ತಾನಷ್ಟೇ. ಯಾವ ಶಬ್ದದಲ್ಲಿ ಕರೆದರೂ ಅರ್ಥ ಬದಲಾಗುವುದಿಲ್ಲ ಎಂಬುದನ್ನು ಮರೆತೇ ಬಿಡುತ್ತಾನೆ. ಒಂದೋ ನಿಮ್ಮನ್ನು ನೀವು ಬದಲಾಯಿಸಿಕೊಂಡು ವಿವಾಹವಾಗಿ, ಇಲ್ಲವೇ ಆಗದೆ ಸುಮ್ಮನಿರಿ. ಬಳಿಕ ಪಶ್ಚಾತ್ತಾಪ ಪಡುವುದು ಸಲ್ಲದು ಎನ್ನುತ್ತಾರೆ ಓಶೋ.

 


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...