Kannada Duniya

ಸುಖ ದಾಂಪತ್ಯದ ಸರಳ ಸೂತ್ರಗಳು….!

ಮದುವೆಯಾದ ಕೆಲವು ವರ್ಷಗಳಲ್ಲೇ ನಿಮಗೆ ಸಂಸಾರದಲ್ಲಿ ಬೇಸರ ಕಂಡು ಬರಬಹುದು. ಇಂಥ ಸಂಗಾತಿಯನ್ನು ಆಯ್ಕೆ ಮಾಡಿಕೊಂಡ ಬಗ್ಗೆ ಬೇಸರವೂ ಕಾಣಿಸಿಕೊಳ್ಳಬಹುದು. ಈಗಲೂ ಕಾಲ ಮಿಂಚಿಲ್ಲ, ಮೊದಲಿನಂತೆ ನಿಮ್ಮ ಪ್ರೇಮ ಜೀವನವನ್ನು ಮತ್ತೆ ಆರಂಭಿಸಬಹುದು ಎಂಬುದನ್ನು ನೆನಪಿನಲ್ಲಿ ಇಟ್ಟುಕೊಳ್ಳಿ.

ಮೊದಲನೆಯದಾಗಿ ಸಂಗಾತಿಗಳಿಬ್ಬರೂ ಫೋನ್ ಅನ್ನು ಪಕ್ಕಕ್ಕಿಟ್ಟು ಜೊತೆಯಾಗಿ ಸಮಯ ಕಳೆಯಿರಿ. ವಾರಾಂತ್ಯದ ಸಂಜೆಯಲ್ಲಿ ಉತ್ತಮವಾದ ರೆಸ್ಟೋರೆಂಟ್ ನಲ್ಲಿ ಕಳೆಯಿರಿ. ಒಬ್ಬರಿಗೊಬ್ಬರು ಮಾತನಾಡಲು, ವಿಷಯ ಹಂಚಿಕೊಳ್ಳಲು ಸಮಯ ಮೀಸಲಿಡಿ.

ಕಾರ್ ನಲ್ಲಿ ಜೊತೆಯಾಗಿ ಪ್ರಯಾಣಿಸುವ ಸಂದರ್ಭ ಸಿಕ್ಕರೆ ಮ್ಯೂಸಿಕ್ ಸೌಂಡ್ ಕಡಿಮೆ ಮಾಡಿ. ಮೊದಲ ಬಾರಿ ಜೊತೆಯಾಗಿ ಸಂಚರಿಸಿದ ಸಂದರ್ಭವನ್ನು ಮೆಲುಕು ಹಾಕಿಕೊಳ್ಳಿ. ಇದು ನಿಮಗೆ ಸಂತೋಷ ನೀಡುತ್ತದೆ.

ಇದು ನಿಮ್ಮ ‘ಸಂಬಂಧವನ್ನು’ ಬಲವಾಗಿಸುತ್ತದೆ

ವೃಥಾ ಒಬ್ಬರಿಗೊಬ್ಬರು ದೂಷಿಸುವುದನ್ನು ಬಿಟ್ಟು ನೋವಿನಲ್ಲಿ ಇರುವವರಿಗೆ ಸಮಾಧಾನ ನೀಡಿ. ಒತ್ತಡ ನಿರಾಸೆಯಿಂದ ಸಂಗಾತಿಯನ್ನು ಹೊರತನ್ನಿ. ನೆಗೆಟಿವ್ ಆಗಿ ಯೋಚಿಸದಿರಿ. ನಿಮ್ಮ ಸಂಗಾತಿಯನ್ನೂ ಆ ರೀತಿ ಯೋಚಿಸಲು ಬಿಡದಿರಿ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...