Kannada Duniya

ಮದುವೆಗೂ ಮೊದಲು ಸಂಗಾತಿಯೊಂದಿಗೆ ಹಣಕಾಸಿನ ಬಗ್ಗೆ ಮಾತುಕತೆ ನಡೆಸಲು ಬಯಸುವವರು ಈ ಸಲಹೆ ಅನುಸರಿಸಿ…!

 

 

 

 

 

 

 

 

 

 

 

ಯಾವುದೇ ಸಂಬಂಧವನ್ನು ಯಶಸ್ವಿಯಾಗಿಸಲು, ಇಬ್ಬರು ವ್ಯಕ್ತಿಗಳು ಪರಸ್ಪರ ಭಾವನಾತ್ಮಕವಾಗಿ ಸಂಪರ್ಕ ಹೊಂದಿರುವುದು ಬಹಳ ಮುಖ್ಯ. ಆದರೆ ಸಂಬಂಧವನ್ನು ಉಳಿಸಿಕೊಳ್ಳಲು ಹಣದ ಪಾತ್ರವೂ ತುಂಬಾ ದೊಡ್ಡದು ಎಂಬುದು ಅಷ್ಟೇ ಮುಖ್ಯ. ಮದುವೆ ಜೀವನದ ದೊಡ್ಡ ನಿರ್ಧಾರ. ಹಾಗಾಗಿ ಅದರ ಜೊತೆಗೆ ಹಣಕಾಸಿನ ವಿಚಾರಗಳ ಬಗ್ಗೆ ಚರ್ಚಿಸುವುದು ಬಹಳ ಮುಖ್ಯ. ಆದರೆ ಈ ಬಗ್ಗೆ ಸಂಗಾತಿಯ ಬಳಿ ವಿಚಾರಿಸಲು ಕೆಲವರು ಹಿಂಜರಿಯುತ್ತಾರೆ. ಅಂತವರು ಈ ಸಲಹೆಗಳನ್ನು ಪಾಲಿಸಿ.

ನೀವು ಭವಿಷ್ಯದ ಬಗ್ಗೆ ಮಾತನಾಡುವಾಗ ಹಣಕಾಸಿನ ವಿಚಾರವನ್ನು ಸೇರಿಸಿಕೊಳ್ಳಿ. ಇಬ್ಬರು ವ್ಯಕ್ತಿಗಳು ತಮ್ಮ ಖರ್ಚು ಮತ್ತು ಆದಾಯದ ಬಗ್ಗೆ ಸರಿಯಾದ ಮಾಹಿತಿಯನ್ನು ಹೊಂದಿರಬೇಕು.  ಹಾಗೇ ನೀವು ಹಣಕಾಸಿನ ಬಗ್ಗೆ ಇಷ್ಟ-ಕಷ್ಟಗಳ ಬಗ್ಗೆ ತಿಳಿದುಕೊಳ್ಳಲು ಪ್ರಯತ್ನಿಸಿ. ಇದು ನಿಮ್ಮ ಭವಿಷ್ಯದ ಯೋಜನೆಗಳ ಬಗ್ಗೆ ನಿಮಗೆ ಹೆಚ್ಚಿನ ಮಾಹಿತಿ ನೀಡುತ್ತದೆ.

ಮಹಿಳೆಯರಲ್ಲಿ ಸೆಕ್ಸ್ ಡ್ರೈವ್ ಹೆಚ್ಚಾಗಲು ಈ 2 ಆಹಾರಗಳನ್ನು ಸೇವಿಸಿ

-ಹಣದ ಬಗ್ಗೆ ಮಾತುಕತೆ ನಡೆಸುವ ಮುನ್ನ ನೀವು ನಿಮ್ಮ ಸಂಗಾತಿಯೊಂದಿಗೆ ಭವಿಷ್ಯದ ಯೋಜನೆಯ ಬಗ್ಗೆ ತಿಳಿದುಕೊಳ್ಳಲು ಪ್ರಯತ್ನಿಸುವುದು ಬಹಳ ಮುಖ್ಯ. ಮದುವೆಯಾದ ಮೇಲೆ ಹೇಗೆ ನೋಡಿಕೊಳ್ಳುತ್ತೀರಿ. ಅವರ ಮುಂದಿನ ಆರ್ಥಿಕ ಗುರಿಗಳ ಬಗ್ಗೆ ಪ್ರಶ್ನೆಗಳನ್ನು ಕೇಳಬಹುದು.

ನಿಮ್ಮ ಸಂಗಾತಿಯ ಆರ್ಥಿಕ ಗುರಿಯ ಬಗ್ಗೆ ತಿಳಿದ ನಂತರ ನೀವು ಹಣದ ಬಗ್ಗೆ ಮಾತನಾಡುವುದು ಸುಲಭವಾಗುತ್ತದೆ. ನಿಮ್ಮ ಒಟ್ಟು ಗಳಿಕೆ ಮತ್ತು ವೆಚ್ಚಗಳ ಬಗ್ಗೆ ನೀವು ಮಾತನಾಡಬಹುದು. ಮನೆ, ಮಗುವನ್ನು ಹೊಂದುವ ವಿಚಾರದ ಬಗ್ಗೆ ಮಾತನಾಡುವಾಗ ಹಣಕಾಸಿನ ವಿಚಾರದ ಬಗ್ಗೆ ಮಾತನಾಡಲು ಸುಲಭವಾಗುತ್ತದೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...