Kannada Duniya

ಮೀತಿಮೀರಿದ ಖರ್ಚಿಗೆ ಕಡಿವಾಣ ಹಾಕುವುದು ಹೇಗೆ…?

ಈಗ ಎಲ್ಲದಕ್ಕೂ ಬೆಲೆ ಏರಿಕೆ ಜಾಸ್ತಿ. ಯಾವುದನ್ನು ತೆಗೆದುಕೊಳ್ಳುವುದಕ್ಕೂ ಆಗಲ್ಲ. ಇದರ ಜೊತೆಗೆ ಮಕ್ಕಳ ವಿದ್ಯಾಭ್ಯಾಸ ಖರ್ಚು, ಅವರ ಬೇಕು ಬೇಡಗಳನ್ನು ಈಡೇರಿಸುವುದು ಇವೆಲ್ಲವೂ ಒಂದು ರೀತಿಯ ಸವಾಲೇ ಎಂದು ಹೇಳಬಹುದು. ಹಾಗಾಗಿ ಈಗ ಮಕ್ಕಳನ್ನು ಮಾಡಿಕೊಳ್ಳುವುದಕ್ಕೂ ಹಿಂದೆ ಮುಂದೆ ನೋಡುತ್ತಾರೆ. ಆದರೆ ಕೆಲವೊಂದು ಮುಂಜಾಗೃತೆಯನ್ನು ಮಾಡಿಕೊಳ್ಳುವುದರ ಮೂಲಕ ಹಣವನ್ನು ಉಳಿತಾಯ ಮಾಡಬಹುದು.

ಕೆಲವರು ಮಕ್ಕಳು ಹುಟ್ಟಿದ ಬಳಿಕ ವಿಪರೀತವಾಗಿ ಖರ್ಚು ಮಾಡುತ್ತಾರೆ. ಮಗುವಿಗೆ ಬೇಕಾಗುತ್ತದೆ ಎಂದು ಕಂಡಿದ್ದನ್ನೆಲ್ಲಾ ಖರೀದಿಸುತ್ತಾರೆ. ಇದರಿಂದ ಹಣ ನೀರಿನಂತೆ ಖರ್ಚು ಆಗುತ್ತದೆ ಹೊರತು ಯಾವುದೇ ಪ್ರಯೋಜನವಿಲ್ಲ. ನಿಮ್ಮ ಮನಸ್ಸಿನ ಮೇಲೆ ನಿಯಂತ್ರಣ ವಿಟ್ಟುಕೊಳ್ಳಿ. ಇದು ಅಗತ್ಯವಿದೆಯಾ ಎಂದು ಎರಡು ಮೂರು ಬಾರಿ ಯೋಚಿಸಿ ಖರೀದಿಸಿ.

ಇನ್ನು ಕೆಲವರು ಚಿಕ್ಕಮಗುವಿನ ಬಟ್ಟೆಗಳಿಗೆ ವಿಪರೀತ ದುಡ್ಡು ಹಾಕುತ್ತಾರೆ. ಮಕ್ಕಳು ಬೇಗನೇ ಬೆಳೆಯುವುದರಿಂದ ಇಂತಹ ತಪ್ಪುಗಳನ್ನು ಮಾಡಬೇಡಿ. ಅತೀಯಾಗಿ ಬೆಲೆ ತೆತ್ತು ತಂದ ಬಟ್ಟೆಗಳನ್ನು 2 ತಿಂಗಳು ಸರಿಯಾಗಿ ಹಾಕುವುದಕ್ಕೆ ಆಗುವುದಿಲ್ಲ. ಹಾಗಾಗಿ ಮಕ್ಕಳಿಗೆ ಬಟ್ಟೆ ತೆಗೆದುಕೊಳ್ಳುವಾಗ ಕಡಿಮೆ ಬೆಲೆಯ , ಕಾಟನ್ ಬಟ್ಟೆಗಳನ್ನು ಖರೀದಿಸಿ.

Read partner mind: ಸಂಗಾತಿಯ ಮನಸ್ಸನ್ನು ಓದುವುದು ಹೇಗೆ ಗೊತ್ತಾ…?

ಇನ್ನು ಕೆಲವರು ವಿಪರೀತವಾಗಿ ಆಟದ ಸಾಮಾನುಗಳನ್ನು ಖರೀದಿಸುತ್ತಾರೆ. ಮಕ್ಕಳು ಅಡುಗೆಮನೆಯಲ್ಲಿರುವ ಪಾತ್ರೆಗಳು, ಹೊರಗಡೆ ಕಲ್ಲು, ಮಣ್ಣುಗಳ ಜೊತೆಯೇ ಹೆಚ್ಚು ಆಟವಾಡಲು ಇಷ್ಟಪಡುತ್ತಾರೆ. ಹಾಗಾಗಿ ಮಕ್ಕಳಿಗೆ ದುಬಾರಿ ಬೆಲೆಯ ಆಟದ ಸಾಮಾನು ತಂದು ಕೊಡುವುದಕ್ಕಿಂತ ಆ ದುಡ್ಡನ್ನು ಉಳಿತಾಯ ಮಾಡಿ. ಇದು ಅವರ ಮುಂದಿನ ಭವಿಷ್ಯಕ್ಕೆ ಸಹಾಯವಾಗುತ್ತದೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...