Kannada Duniya

Read partner mind: ಸಂಗಾತಿಯ ಮನಸ್ಸನ್ನು ಓದುವುದು ಹೇಗೆ ಗೊತ್ತಾ…?

ಪ್ರತಿ ಬಾರಿ ನಿಮ್ಮ ಸಂಗಾತಿಯ ಮೂಡ್ ತಿಳಿಯದೆಯೇ ಮಾತನಾಡಲು ಹೋಗಿ ಜಗಳಗಳಾಗುವ ಸಂಭವ ಹೆಚ್ಚಿರುತ್ತದೆ. ಅದಕ್ಕಾಗಿ ಅವರ ಮೂಡ್ ತಿಳಿದುಕೊಳ್ಳುವ ಕೆಲವು ಸರಳ ಟಿಪ್ಸ್ ಗಳನ್ನು ತಿಳಿಯೋಣ.

ಮನಸ್ಸನ್ನು ಓದುವ ಕಲೆಯ ಬಗ್ಗೆ ತಿಳಿದುಕೊಳ್ಳಿ. ಮೈಂಡ್ ರೀಡಿಂಗ್ ನಿಜವಾದ ಸಮಸ್ಯೆಗಳನ್ನು ಮೂಲದಲ್ಲೇ ಬಗೆಹರಿಸಲು ನೆರವಾಗುತ್ತದೆ. ಮಾತು ಆರಂಭಿಸುವ ಮುನ್ನ ಅವರ ದೇಹ ಭಾಷೆಯನ್ನು ತಿಳಿಯಿರಿ. ಮುಖ ಚಹರೆಯನ್ನು ಗಮನಿಸಿ, ಕಣ್ಣು ಕೂಡಾ ಕೆಲವೊಮ್ಮೆ ಮನಸ್ಸಿನ ಭಾವನೆಗಳನ್ನು ಹೇಳುತ್ತವೆ.

ಇವುಗಳ ಮೂಲಕವೇ ನಿಮ್ಮ ಸಂಗಾತಿಯ ಭಾವನೆ, ಆಲೋಚನೆಗಳನ್ನು ತಿಳಿದುಕೊಳ್ಳಿ. ಅವರು ಸಿಟ್ಟಿನಲ್ಲಿದ್ದರೆ, ಅದರ ಕಾರಣ ತಿಳಿಯಿರಿ. ಬೇಸರದಲ್ಲಿದ್ದರೆ ಸಮಾಧಾನಿಸಿ. ಖಿನ್ನತೆಯಲ್ಲಿದ್ದರೆ ಅದರಿಂದ ಹೊರತರಲು ಪ್ರಯತ್ನಿಸಿ.

ನಿಮ್ಮ ಜೋಕ್ ಗೆ ಅವರು ನಗುತ್ತಿಲ್ಲ ಎಂದಾದರೆ ಯಾವುದೋ ಚಿಂತೆ ಅವರ ಮನಸ್ಸನ್ನು ಕೊರೆಯುತ್ತಿದೆ ಎಂದರ್ಥ. ಅಂಥ ಸಂದರ್ಭದಲ್ಲಿ ನೀವು ಸಿಟ್ಟಾಗುವ ಬದಲು ಅವರ ಬಳಿ ಕೂತು ವಿಚಾರಿಸಿ, ಮಾತನಾಡಿ. ನೀವು ಅವರ ಮೇಲೆ ಗಮನ ಕೊಡುತ್ತಿದ್ದೀರಿ ಎಂಬ ವಿಷಯವೇ ಅವರ ನೋವಿನ ಹೆಚ್ಚಿನ ಪಾಲನ್ನು ಕಡಿಮೆ ಮಾಡುತ್ತದೆ.

Washing face : ನಿಮ್ಮ ಮುಖವನ್ನು ತೊಳೆಯುವಾಗ ಈ ತಪ್ಪುಗಳನ್ನು ಮಾಡಿದರೆ ತ್ವಚೆ ಹಾಳಾಗುತ್ತದೆ…!

ಮುಖಕ್ಕೆ ಮುಖ ಕೊಟ್ಟು ಮಾತನಾಡುತ್ತಿಲ್ಲ, ಮಾತಿನ ಧಾಟಿ ಬದಲಾಗಿದೆ ಎಂಬುದೆಲ್ಲಾ ಯಾವುದೋ ಸಮಸ್ಯೆಯ ಲಕ್ಷಣ ಎಂಬುದನ್ನು ತಿಳಿಯಿರಿ. ಸದಾ ಮನೆಗೆ ಬಂದಾಕ್ಷಣ ಮನೆಮಂದಿಯಲ್ಲೆಲ್ಲಾ ಮಾತನಾಡುವ ವ್ಯಕ್ತಿ ಆ ದಿನ ಸಪ್ಪಗಿದ್ದಾರೆ ಎಂದಾದರೂ ಅವರು ನೋವಿನಲ್ಲಿದ್ದಾರೆ ಎಂಬುದೇ ಅರ್ಥ. ಹಾಗಾಗಿ ಸಂಗಾತಿಯ ಮೂಡ್ ಅರಿತುಕೊಂಡು ವ್ಯವಹರಿಸಿ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...