Kannada Duniya

ನಿಮ್ಮ ಸಂಬಂಧ ಗಟ್ಟಿಯಾಗಲು ಈ ಟಿಪ್ಸ್ ಟ್ರೈ ಮಾಡಿ…!

ಗಂಡ-ಹೆಂಡತಿಯ ನಡುವಿನ ಸಂಬಂಧ ಅನ್ಯೋನ್ಯವಾಗಿದ್ದರೆ ಬದುಕು ಬಂಗಾರದಂತಿರುತ್ತದೆ. ಆದರೆ ಕೆಲವೊಮ್ಮೆ ಸಂಗಾತಿಗಳ ನಡುವಿನ ಕಿತ್ತಾಟ, ತಾನು ಹೇಳಿದ್ದೇ ಸರಿ ಎನ್ನುವ ಮನೋಭಾವದಿಂದ ಈ ಸಂಬಂಧದ ಮಧ್ಯೆ ಬಿರುಕು ಮೂಡುತ್ತದೆ. ಇಲ್ಲೊಂದಿಷ್ಟು ಟಿಪ್ಸ್ ಇದೆ. ಇದು ನಿಮ್ಮ ಸಂಗಾತಿಯ ಮನಸ್ಸನ್ನು ಅರ್ಥಮಾಡಿಕೊಂಡು ಬದುಕುವುದಕ್ಕೆ ಸಹಕಾರಿಯಾಗಲಿದೆ.

-ನಿಮ್ಮ ಸಂಗಾತಿ ಹೇಗಿದ್ದರೂ ಹಾಗೇ ಅವರನ್ನು ಸ್ವೀಕರಿಸಿ. ಅವರು ಹಾಗಿದ್ದಾರೆ ನೀನ್ಯಾಕೆ ಹೀಗೆ, ಅವರ ಸಂಬಳ ಅಷ್ಟಿದೆ ನಿಮಗ್ಯಾಕೆ ಇಷ್ಟು? ಎಂಬಿತ್ಯಾದಿ ಕಮೆಂಟ್ ಮಾಡುವುದಕ್ಕಿಂತ ಅವರು ಹೇಗಿದ್ದಾರೋ ಹಾಗೇ ಅವರನ್ನು ಒಪ್ಪಿಕೊಳ್ಳಿ. ಇದರಿಂದ ನಿಮ್ಮ ಸಂಬಂಧ ಗಟ್ಟಿಯಾಗುತ್ತದೆ.

ಚಾಣಕ್ಯ ನೀತಿ: ಪುರುಷರು ತಮ್ಮ ಹೆಂಡತಿಗೆ ಈ ನಾಲ್ಕು ವಿಷಯಗಳನ್ನು ಎಂದಿಗೂ ಹೇಳಬಾರದು….!

-ನಿಮ್ಮ ಪ್ರೀತಿಯನ್ನು ವ್ಯಕ್ತಪಡಿಸಿ. ಕೆಲವರು ಮುಜುಗರ ಪಡುತ್ತಾರೆ. ಇದರಿಂದ ಸಂಬಂಧದಲ್ಲಿ ಗಟ್ಟಿತನ ಉಳಿಯಲ್ಲ. ಹಾಗಾಗಿ ನಿಮ್ಮ ಸಂಗಾತಿಯನ್ನು ಮನಸಾರೆ ಪ್ರೀತಿಸಿ. ಅವರ ಹುಟ್ಟುಹಬ್ಬ, ಮದುವೆ ವಾರ್ಷಿಕೊತ್ಸವ ಹೀಗೆ ವಿಶೇಷ ಸಂದರ್ಭದಲ್ಲಿ ಚಿಕ್ಕಪುಟ್ಟ ಉಡುಗೊರೆ ಕೊಟ್ಟು ನಿಮ್ಮ ಪ್ರೀತಿಯನ್ನು ಅವರ ಬಳಿ ವ್ಯಕ್ತಪಡಿಸಿ.

-ಅತೀಯಾದ ನಿರೀಕ್ಷೆ ಇಟ್ಟುಕೊಳ್ಳಬೇಡಿ.ಇದರಿಂದ ನೋವಾಗುತ್ತದೆ. ಪರಿಸ್ಥಿತಿಗಳು ಒಂದೇ ರೀತಿ ಇರುವುದಿಲ್ಲ. ಹಾಗಾಗಿ ನಿಮ್ಮ ಸಂಗಾತಿಯ ಆರ್ಥಿಕ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಪ್ರಯತ್ನಿಸಿ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...