Kannada Duniya

ನಿಮ್ಮ ಸಂಗಾತಿ ತಂದೆತಾಯಿಗೆ ಒಬ್ಬನೇ ಮಗನಾಗಿದ್ದರೆ ನೀವು ಈ ಜವಾಬ್ದಾರಿಯನ್ನು ನಿರ್ವಹಿಸಬೇಕಾಗುತ್ತದೆ

ಕೆಲವು ಪೋಷಕರು ಒಬ್ಬನೇ ಮಗನನ್ನು ಹೊಂದಿರುತ್ತಾರೆ. ಪೋಷಕರಿಗೆ ಒಬ್ಬ ಮಗನನ್ನು ನೋಡಿಕೊಳ್ಳುವುದು ಸುಲಭ. ಆದರೆ ಒಬ್ಬ ಮಗನಿಗೆ ಪೋಷಕರನ್ನು ನೋಡಿಕೊಳ್ಳವುದು ಕಷ್ಟವಾಗಬಹುದು. ಹಾಗಾಗಿ ಮದುವೆಯ ನಂತರ ಒಬ್ಬನೇ ಮಗನನ್ನು ಮದುವೆಯಾದ ಸಂಗಾತಿ ಈ ಜವಾಬ್ದಾರಿಯನ್ನು ನಿರ್ವಹಿಸಬೇಕಾಗುತ್ತದೆ.

ಪೋಷಕರಿಗೆ ತಮ್ಮ ಮಗ ತಮ್ಮ ಜೊತೆ ಸಮಯ ಕಳೆಯಬೇಕು ಎಂಬ ಹಂಬಲವಿರುತ್ತದೆ. ಹಾಗೇ ನಿಮಗೂ ನಿಮ್ಮ ಪತಿಯ ಜೊತೆ ಸಮಯ ಕಳೆಯಬೇಕೆಂಬ ಆಸೆ ಇರುತ್ತದೆ. ಆದರೆ ಅದಕ್ಕಾಗಿ ನಿಮ್ಮ ಸಂಗಾತಿ ಪೋಷಕರ ಜೊತೆ ಸಮಯ ಕಳೆಯುವುದನ್ನು ತಡೆಯಬೇಡಿ.

ಹಾಗೇ ವೃದ್ಧಾಪ್ಯದಲ್ಲಿ ಪೋಷಕರು ಮಗನ ಜೊತೆಗೆ ಇರಲು ಬಯಸುತ್ತಾರೆ. ಹಾಗಾಗಿ ಅವರನ್ನು ದೂರಮಾಡಲು ಪ್ರಯತ್ನಿಸಬೇಡಿ. ಪೋಷಕರನ್ನು ನಿಮ್ಮ ಜೊತೆಯಲ್ಲಿ ಇರಿಸಿಕೊಳ್ಳಿ. ಅವರನ್ನು ಅವರ ಮಗನಿಂದ ದೂರಮಾಡಬೇಡಿ.

ಕುಟುಂಬದಲ್ಲಿ ಜಗಳ ಸಹಜ. ಅಂದಮಾತ್ರಕ್ಕೆ ಪೋಷಕರ ಬಗ್ಗೆ ಅವರ ಮಗನ ಬಳಿ ಚಾಡಿ ಹೇಳಬೇಡಿ. ಅದರ ಬದಲು ಸಮಸ್ಯೆಗಳನ್ನು ನೇರವಾಗಿ ಬಗೆಹರಿಸಿಕೊಳ್ಳಿ. ಯಾವುದೇ ವಿಚಾರಗಳನ್ನು ಒಟ್ಟಿಗೆ ಹಂಚಿಕೊಳ್ಳಿ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...