Kannada Duniya

ಕಾಡೆಂದರೆ ನವಜೋಡಿಗಳಿಗೆ ಬಲುಪ್ರಿಯವಂತೆ!

ಮದುವೆ  ನಿಶ್ಚಯವಾಗುತ್ತಿದ್ದಂತೆ ಹನಿಮೂನ್ ಸ್ಪಾಟ್ ಕೂಡಾ ಪ್ಲಾನ್ ಆಗುತ್ತದೆ. ಹಿಂದೆಲ್ಲಾ ದೊಡ್ಡ ದೊಡ್ಡ ಪಟ್ಟಣಗಳಿಗೆ ಹನಿಮೂನ್ ಹೋಗುತ್ತಿದ್ದವರ ಸಂಖ್ಯೆ ಹೆಚ್ಚಿತ್ತು. ಆದರೆ ಈಗ ಬಹುತೇಕರು ಕಾಡಿನತ್ತ ಮುಖಮಾಡುತ್ತಿದ್ದಾರೆ. ಇದರ ಉದ್ದೇಶ ಏನಿರಬಹುದು?

ಕಾಡಿನಲ್ಲಿ ಮರಗಿಡಗಳ ನಡುವೆ ಶಾಂತವಾಗಿ ಸಮಯ ಕಳೆಯಲು ಅವಕಾಶ ಸಿಗುತ್ತದೆ ಎಂಬ ಕಾರಣಕ್ಕೆ ಹಲವರು ಕಾಡಿನ ಪ್ರದೇಶವನ್ನೇ ಹನಿಮೂನ್ ಗೆ ಆಯ್ಕೆ ಮಾಡಿಕೊಳ್ಳುತ್ತಾರೆ. ಕಾಡಿನ ವಾತಾವರಣ ಶಾಂತವಾಗಿರುತ್ತದೆ ಹಾಗೂ ಹೆಚ್ಚಿನ ಸಮಯವನ್ನು ಜೊತೆಯಾಗಿ ಕಳೆಯಲು ನೆರವಾಗುತ್ತದೆ ಎಂಬುದು ಇದರ ಹಿಂದಿನ ಉದ್ದೇಶ.

ಉತ್ತರಾಖಾಂಡದ ಜಿಮ್ ಕಾರ್ಬೆಟ್ ನಲ್ಲಿರುವ ನ್ಯಾಷನಲ್ ಪಾರ್ಕ್ ಯುವಜೋಡಿಗಳ ನೆಚ್ಚಿನ ತಾಣವಾಗಿದೆ. ಒಂದೆರಡು ದಿನ ಇಲ್ಲಿ ಉಳಿದು ಪ್ರಾಣಿಗಳ ವೀಕ್ಷಣೆ ಮಾಡಿ ಮಾಲಿನ್ಯ, ಶಬ್ದಗಳಿಂದ ದೂರವಿರಲು ನವದಂಪತಿಗಳು ಬಯಸುತ್ತಾರಂತೆ.

ಪ್ರಕೃತಿ ಮಧ್ಯೆ ಹೊಸ ಜೀವನ ಆರಂಭಿಸುವುದು ಹಲವರ ಕನಸು. ಹಾಗಾಗಿ ರಾಷ್ಟ್ರೀಯ ಉದ್ಯಾನವನಗಳು, ಕಾಡಿನ ರೆಸಾರ್ಟ್ ಗಳು ಹೆಚ್ಚಿನ ನವದಂಪತಿಗಳನ್ನು ಆಕರ್ಷಿಸುತ್ತಿವೆ. ಇದರಿಂದ ಪ್ರವಾಸೋದ್ಯಮಕ್ಕೂ ಲಾಭವಾಗುತ್ತಿದೆ ಎಂಬುದನ್ನು ಮರೆಯುವಂತಿಲ್ಲ.

 


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...