Kannada Duniya

ಆಗಸ್ಟ್ 9 ರಂದು ಬುಧವು ಸಿಂಹ ಗ್ರಹವನ್ನು ಪ್ರವೇಶಿಸಲಿದ್ದಾನೆ. ಈ ರಾಶಿಯವರಿಗೆ ವೃತ್ತಿ ಜೀವನದಲ್ಲಿ ಯಶಸ್ಸು ಸಿಗಲಿದೆ

ಬುಧ ಗ್ರಹವು ಆಗಸ್ಟ್ 9ರಂದು ಸಿಂಹ ರಾಶಿಗೆ ಪ್ರವೇಶಿಸುತ್ತಾನೆ. ಮತ್ತು ಆಗಸ್ಟ್ 26ರವರೆಗೆ ಆ ರಾಶಿಯಲ್ಲೇ ಇರುತ್ತಾನೆ. ಬಳಿಕ ಕನ್ಯಾರಾಶಿಯ ಕಡೆಗೆ ಸಾಗುತ್ತಾನೆ. ಆಗಸ್ಟ್ 17ರಂದು ಸೂರ್ಯನು ಸಿಂಹ ರಾಶಿಗೆ ಪ್ರವೇಶಿಸುತ್ತಾನೆ. ಅಲ್ಲಿ ಈಗಾಗಲೇ ಬುಧನು ಇರುವುದರಿಂದ ಬುಧಾದಿತ್ಯ ಯೋಗವು ರೂಪುಗೊಳ್ಳುತ್ತದೆ. ಇದರಿಂದ ಕೆಲವು ರಾಶಿಯವರಿಗೆ ಮಂಗಳಕರವಾಗಲಿದೆ.

 

ಕನ್ಯಾರಾಶಿ : ಈ ರಾಶಿ ಬದಲಾವಣೆಯಿಂದ ಕನ್ಯಾರಾಶಿಯವರಿಗೆ ವ್ಯಾಪಾರದಲ್ಲಿ ಲಾಭ ಪಡೆಯುವ ಸಾಧ್ಯತೆ ಇದೆ. ಹಣವು ಹೆಚ್ಚಾಗಲಿದೆ ಜೊತೆಗೆ ಖರ್ಚು ಕೂಡ ಹೆಚ್ಚಾಗುತ್ತದೆ. ಈ ಸಮಯದಲ್ಲಿ ಕಠಿಣ ಪರಿಶ್ರಮ ಹಾಕಿದರೆ ಶುಭ ಫಲಿತಾಂಶ ಸಿಗುತ್ತದೆ. ಆದಾಯವೂ ಹೆಚ್ಚಾಗುವ ನಿರೀಕ್ಷೆ ಇದೆ.

 

ತುಲಾ ರಾಶಿ : ವೃತ್ತಿಜೀವನದಲ್ಲಿ ಉದ್ಯೋಗದಲ್ಲಿರುವ ಈ ರಾಶಿಯವರು ಅದೃಷ್ಟದ ಬೆಂಬಲವನ್ನು ಪಡೆಯುತ್ತಾರೆ. ವ್ಯಾಪಾರದಲ್ಲಿ ಉತ್ತಮ ಲಾಭವನ್ನು ಗಳಿಸುತ್ತಾರೆ. ಆದಾಯ ಗಣನೀಯವಾಗಿ ಹೆಚ್ಚಾಗುತ್ತದೆ.

 

ಶುಕ್ರನು ಕನ್ಯಾರಾಶಿಗೆ ಪ್ರವೇಶ; ಈ ರಾಶಿಗಳ ಆದಾಯ ಹೆಚ್ಚಳವಾಗಲಿದೆಯಂತೆ

 

ಕುಂಭರಾಶಿ : ನಿಮ್ಮ ಮನೆ, ಮದುವೆ ಮತ್ತು ಜೀವನದಲ್ಲಿ ವ್ಯತ್ಯಾಸವಾಗಲಿದೆ. ಕಚೇರಿಯಲ್ಲಿ ನಿಮ್ಮ ಕೆಲಸವನ್ನು ಪ್ರಶಂಸಿಸಲಾಗುತ್ತದೆ. ಈ ಅವಧಿಯು ವ್ಯಾಪಾರಸ್ಥರಿಗೆ ಬಹಳ ಪ್ರಯೋಜನಕಾರಿಯಾಗಲಿದೆ. ಈ ಸಮಯ ನೀವು ಉತ್ತಮ ಲಾಭ ಗಳಿಸಲು ಸಾಧ್ಯವಾಗುತ್ತದೆ.

 

Budha moving to Simha Rashi will bring these changes to some Rashis


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...