Kannada Duniya

‘ವಾಸ್ತು ದೋಷ’ : ಗಣೇಶನ ಪೋಟೊ ಹಾಕುವಾಗ ಈ ನಿಯಮ ಪಾಲಿಸಿ…!

ಗಣೇಶನನ್ನು ವಿಘ್ನ ನಿವಾರಕನೆಂದು ಕರೆಯುತ್ತಾರೆ. ಆತನನ್ನು ಭಕ್ತಿಯಿಂದ ಪೂಜಿಸಿದರೆ ಎಲ್ಲಾ ಸಂಕಷ್ಟಗಳು ದೂರವಾಗುತ್ತದೆ.

ಹಾಗಾಗಿ ಮನೆಯಲ್ಲಿ ವಾಸ್ತುದೋಷವಿದ್ದಾಗ ಮನೆಯಲ್ಲಿ ಅನೇಕ ಸಮಸ್ಯೆಗಳು ಕಾಡುತ್ತದೆ. ಹಾಗಾಗಿ ಈ ವಾಸ್ತುದೋಷವನ್ನು ನಿವಾರಿಸಲು ಗಣೇಶನ ಫೋಟೊವನ್ನು ಮನೆಯಲ್ಲಿ ಹಾಕುತ್ತಾರೆ. ಆದರೆ ಹಾಕುವಾಗ ಈ ನಿಯಮಗಳನ್ನು ಪಾಲಿಸಿ.

ಮನೆಯಲ್ಲಿ ವಾಸ್ತುದೋಷವಿದ್ದಾಗ ಬಿಳಿ ಬಣ್ಣದ ಗಣೇಶನ ಮೂರ್ತಿಯನ್ನು ಮನೆಯಲ್ಲಿ ಇಟ್ಟರೆ ಮನೆಯಲ್ಲಿ, ಸುಖ, ಶಾಂತಿ, ನೆಮ್ಮದಿ ನೆಲೆಸಿರುತ್ತದೆ. ಗಣೇಶನ ಮೂರ್ತಿಯನ್ನು ಮನೆಯ ಬ್ರಹ್ಮಸ್ಥಳ ಅಂದರೆ ಮಧ್ಯದಲ್ಲಿ , ಈಶಾನ್ಯ ಅಥವಾ ಪೂರ್ವ ದಿಕ್ಕಿನಲ್ಲಿ ಇಡಿ. ಇದು ಮಂಗಳಕರವಾಗಿದೆ. ಆದರೆ ಗಣಪತಿಯ ಮುಖ ದಕ್ಷಿಣ ದಿಕ್ಕಿನಲ್ಲಿರಬಾರದು.

ಮಂಗಳದೋಷವನ್ನು ನಿವಾರಿಸಲು ಇವುಗಳನ್ನು ಪೂಜಿಸಿ

ಯಾವಾಗಲೂ ಗಣೇಶನ ಮೂರ್ತಿಯನ್ನು ಹಾಕುವಾಗ ಮೋದಕ ಮತ್ತು ಇಲಿಯ ಮೂರ್ತಿಯನ್ನು ಇಡುವುದನ್ನು ತಪ್ಪಿಸಬಾರದು. ಮನೆಯಲ್ಲಿ ಗಣಪತಿ  ಕುಳಿತಿರುವ ಮತ್ತು ಕೆಲಸದ ಸ್ಥಳದಲ್ಲಿ ನಿಂತಿರುವ ಪೋಟೊ ಹಾಕಿ. ಇದರಿಂದ ಜೀವನದಲ್ಲಿ ಸುಖ, ಸಂತೋಷ ನೆಲೆಸಿರುತ್ತದೆ. ಗಣಪತಿಯನ್ನು ಇಡುವ ಸ್ಥಳ ಕೊಳಕಾಗಿರಬಾರದು. ಮತ್ತು ಸೊಂಡಿಲು ಎಡಭಾಗಕ್ಕಿರುವ ಗಣಪತಿಯ ಮೂರ್ತಿಯನ್ನು ಮನೆಯಲ್ಲಿಡಿ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...