Kannada Duniya

ರಾಹು ದೋಷವಿದ್ದರೆ ಈ ರೀತಿ ಪರಿಹರಿಸಿಕೊಳ್ಳಿ….!

ರಾಹುಗ್ರಹವನ್ನು ಜಾತಕದಲ್ಲಿ ದೋಷಪೂರಿತ ಗ್ರಹವೆಂದು ಪರಿಗಣಿಸಲಾಗುತ್ತದೆ. ಯಾಕೆಂದರೆ ಅದು ಜನರ ಜೀವನದಲ್ಲಿ ಅಡೆತಡೆಗಳನ್ನು ಸೃಷ್ಟಿಸುತ್ತದೆ. ರಾಹು ಗ್ರಹ ಶುಭ ಮತ್ತು ಕೆಟ್ಟ ಫಲಿತಾಂಶ ನೀಡುತ್ತದೆ. ಹಾಗಾಗಿ ರಾಹು ದೋಷದಿಂದ ಏನಾಗುತ್ತದೆ ಮತ್ತು ಅದನ್ನು ಪರಿಹರಿಸಿಕೊಳ್ಳುವುದು ಹೇಗೆ ಎಂಬುದನ್ನು ತಿಳಿದುಕೊಳ್ಳೋಣ.

ಜಾತಕದಲ್ಲಿ ರಾಹುದೋಷವಿದ್ದರೆ ಅದು ಕಾಲಸರ್ಪ ದೋಷವನ್ನು ಉಂಟುಮಾಡುತ್ತದೆ. ರಾಹು ಜಾತಕದಲ್ಲಿ ಬಲವಾದ ಸ್ಥಾನದಲ್ಲಿದ್ದರೆ ರಾಜನಾಗಬಹುದು. ಆದರೆ ಜಾತಕದಲ್ಲಿ ದುರ್ಬಲನಾಗಿದ್ದರೆ ಜೀವನದಲ್ಲಿ ಸಮಸ್ಯೆಗಳು ಎದುರಾಗುತ್ತದೆ. ಮಾನಸಿಕ ಒತ್ತಡ ಹೆಚ್ಚಾಗುತ್ತದೆ. ಆರ್ಥಿಕ ನಷ್ಟ, ಗೌರವ ಪ್ರತಿಷ್ಠೆ ಮತ್ತು ಸಂಪತ್ತು ವ್ಯಕ್ತಿ ಕೈಯಿಂದ ಜಾರಿಹೋಗುತ್ತದೆ.

ರಾಹುದೋಷವನ್ನು ತೊಡೆದುಹಾಕಲು ಈ ಪರಿಹಾರವನ್ನು ಮಾಡಿ

ಇದಕ್ಕೆ ಕೆಲವು ಪರಿಹಾರಗಳನ್ನು ಮಾಡಿಕೊಳ್ಳುವುದರ ಮೂಲಕ ರಾಹು ದೋಷದ ಪರಿಣಾಮವನ್ನು ಕಡಿಮೆಮಾಡಿಕೊಳ್ಳಬಹುದು. ಪ್ರತಿದಿನ ರಾಹು ಮಂತ್ರವನ್ನು ಜಪಿಸಿ. ಬಾರ್ಲಿ, ಸಾಸಿವೆ, ನಾಣ್ಯ, ಏಳು ಬಗೆಯ ಧಾನ್ಯಗಳು, ನೀಲಿ ಮತ್ತು ಕಂದು ಬಣ್ಣದ ಬಟ್ಟೆ ಮತ್ತು ಗಾಜಿನ ವಸ್ತುಗಳನ್ನು ಬುಧವಾರ ದಾನ ಮಾಡಿ. ಪ್ರತಿದಿನ ನೀರಿಗೆ ಶ್ರೀಗಂಧದ ಸುಗಂಧ ದ್ರವ್ಯವನ್ನು ಮಿಕ್ಸ್ ಮಾಡಿ ಸ್ನಾನ ಮಾಡಿ. ಶಿವಲಿಂಗಕ್ಕೆ ಗಂಗಾಜಲ ಅರ್ಪಿಸಿ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...