Kannada Duniya

ನಿಮ್ಮ ಈ ಅಭ್ಯಾಸವನ್ನು ತ್ವರಿತವಾಗಿ ಕಲಿಯುತ್ತಾರಂತೆ ಮಕ್ಕಳು ….!

ಮಗುವಿಗೆ ಮನೆಯೇ ಮೊದಲ ಪಾಠ ಶಾಲೆಯಾಗಿರುತ್ತದೆ. ಹಾಗಾಗಿ ಮಕ್ಕಳು ಮನೆಯಲ್ಲಿ ಪೋಷಕರ ಮಾತು, ನಡವಳಿಕೆಯನ್ನು ಬಹಳ ಬೇಗನೆ ಕಲಿತುಕೊಳ್ಳುತ್ತಾರೆ. ಅದರಲ್ಲೂ ಮಕ್ಕಳು ನಮ್ಮ ಈ ಅಭ್ಯಾಸಗಳನ್ನು ಬಹಳ ಬೇಗನೆ ಕಲಿತುಕೊಳ್ಳುತ್ತಾರಂತೆ. ಹಾಗಾಗಿ ಮಕ್ಕಳ ಮುಂದೆ ಈ ರೀತಿ ಮಾಡುವ ಮುನ್ನ ಎಚ್ಚರದಿಂದಿರಿ.

ಮಗುವಿನ ಮುಂದೆ ಅಪ್ಪಿತಪ್ಪಿಯೂ ಕೆಟ್ಟ ಮಾತುಗಳನ್ನು ಆಡಬೇಡಿ. ಬೇರೆಯವರಿಗೆ ಗೌರವ ನೀಡಿ.

ಹಾಗೇ ಮಕ್ಕಳ ಮುಂದೆ ದುಂದು ವೆಚ್ಚವನ್ನು ಮಾಡಬೇಡಿ. ಮಕ್ಕಳು ಇದೇ ಅಭ್ಯಾಸವನ್ನು ರೂಢಿಸಿಕೊಳ್ಳುತ್ತಾರೆ. ಹಾಗಾಗಿ ಅವರ ಮುಂದೆ ಹಣ ನೋಡಿಕೊಂಡು ಖರ್ಚು ಮಾಡಿ.

ಪೋಷಕರು ಯಾವುದೇ ಆಹಾರವನ್ನು ಇಷ್ಟಪಟ್ಟು ತಿನ್ನಿ. ಒಂದು ವೇಳೆ ನೀವು ಸೊಪ್ಪು ತಿನ್ನಲು ಇಷ್ಟಪಡದಿದ್ದರೆ ಮಕ್ಕಳು ಅದನ್ನೇ ಕಲಿಯುತ್ತಾರೆ.

ಮಕ್ಕಳ ಮುಂದೆ ನಿರಾಶಾವಾದಿ ಚಿಂತನೆಗಳನ್ನು ಮಾಡಬೇಡಿ. ಮಕ್ಕಳ ಮುಂದೆ ಯಾವಾಗಲೂ ಸಕರಾತ್ಮಕವಾಗಿ ಯೋಚಿಸಿ.

ಮಕ್ಕಳ ಮುಂದೆ ಸರಳ ವ್ಯಕ್ತಿತ್ವವನ್ನು ರೂಢಿಸಿಕೊಳ್ಲಿ. ಮೋಸ, ವಂಚನೆ ಮಾಡಬೇಡಿ. ಯಾವಾಗಲೂ ಪ್ರಾಮಾಣಿಕರಾಗಿರಿ.

 


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...