Kannada Duniya

ನೀವು ಮೊದಲ ಬಾರಿಗೆ ಗೆಳತಿಯೊಂದಿಗೆ ಪ್ರಯಾಣ ಮಾಡುತ್ತಿದ್ದರೆ ಈ ಸಲಹೆ ಪಾಲಿಸಿ

ನಿಮ್ಮ ಮತ್ತು ನಿಮ್ಮ ಗೆಳತಿಯ ನಡುವಿನ ಸಂಬಂಧ ಚೆನ್ನಾಗಿರಲು ಗೆಳತಿಯನ್ನು ಆಗಾಗ ಹೊರಗಡೆ ಸುತ್ತಾಡಲು ಕರೆದುಕೊಂಡು ಹೋಗಬೇಕು. ಯಾಕೆಂದರೆ ಹುಡುಗಿಯರಿಗೆ ಹೊರಗಡೆ ಸುತ್ತುವುದು ಬಹಳ ಪ್ರಿಯವಾಗಿರುತ್ತದೆ. ಇದರಿಂದ ನಿಮ್ಮ ಮೇಲಿನ ಪ್ರೀತಿ ಹೆಚ್ಚಾಗುತ್ತದೆ. ಆದರೆ ಆ ವೇಳೆ ಈ ಸಲಹೆ ಪಾಲಿಸಿ.

ಕೆಲವರಿಗೆ ಸಮುದ್ರ ತೀರವೆಂದರೆ ಬಹಳ ಇಷ್ಟ. ಕೆಲವರಿಗೆ ಪರ್ವತದ ಕಣಿವೆಗಳೆಂದರೆ ಬಹಳ ಪ್ರಿಯ. ಹಾಗಾಗಿ ಒಬ್ಬೊಬ್ಬರ ಇಷ್ಟಗಳು ಬೇರೆ ಬೇರೆಯಾಗಿರುತ್ತದೆ. ಹಾಗಾಗಿ ಈ ವೇಳೆ ಇಬ್ಬರ ಇಷ್ಟಗಳಿಗೂ ಆದ್ಯತ ನೀಡಿ.

ಪ್ರತಿಯೊಬ್ಬರು ತಮ್ಮ ಸಂಗಾತಿಗೆ ಚೆನ್ನಾಗಿ ಕಾಣಿಸಬೇಕೆಂದು ಬಯಸುತ್ತಾರೆ. ಅಂದಮಾತ್ರಕ್ಕೆ ಮೇಕಪ್ ಮಾಡಿಕೊಂಡು ಅವರ ಮುಂದೆ ಹೋಗಬೇಡಿ. ನೀವು ಹೇಗಿದ್ದೀರೋ ನಿಮ್ಮ ಸಂಗಾತಿ ಮುಂದೆ ಹಾಗೇ ಇರಿ.

ಅಲ್ಲದೇ ಪ್ರಯಾಣದ ವೇಳೆ ಎಲ್ಲರೂ ಪ್ರಯಾಣದ ನೆನಪು ದೀರ್ಘಕಾಲವಿರಲು ಫೋಟೊಗಳನ್ನು ತೆಗೆದುಕೊಳ್ಳುತ್ತಾರೆ. ಆದರೆ ಪೋಟೊಗಳನ್ನು ತೆಗೆದುಕೊಳ್ಳುವುದರಲ್ಲೇ ಸಮಯ ಕಳೆಯಬೇಡಿ. ಈ ಪ್ರಯಾಣದ ಸವಿ ನೆನಪು ದೀರ್ಘಕಾಲವಿರಲು ವಿಶೇಷವಾದುದನ್ನು ಮಾಡಿ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...