Kannada Duniya

ನಿಮ್ಮ ಸಂಬಂಧದಲ್ಲಿ ಪ್ರೀತಿಯ ಕೊರತೆಯಾದರೆ ಅದನ್ನು ಹೀಗೆ ಸರಿಪಡಿಸಿಕೊಳ್ಳಿ

ಸಂಬಂಧದಲ್ಲಿ ಪ್ರೀತಿ ಬಹಳ ಮುಖ್ಯ ಪಾತ್ರ ವಹಿಸುತ್ತದೆ. ಸಂಗಾತಿಗೆ ಒಬ್ಬರ ಮೇಲೆ ಒಬ್ಬರಿಗ ಪ್ರೀತಿ ಇದ್ದರೆ ಮಾತ್ರ ಆ ಸಂಬಂಧ ದೀರ್ಘಕಾಲ ಬಲವಾಗಿರುತ್ತದೆ. ಆದರೆ ಈ ಪ್ರೀತಿಯಲ್ಲಿ ಕೊರತೆಯಾದರೆ ಅನೇಕ ಸಮಸ್ಯೆಗಳು ಕಾಡುತ್ತದೆ. ಹಾಗಾಗಿ ನಿಮ್ಮ ಸಂಬಂಧದಲ್ಲಿ ಪ್ರೀತಿಯ ಕೊರತೆಯಾದರೆ ಅದನ್ನು ಹೀಗೆ ಸರಿಪಡಿಸಿಕೊಳ್ಳಿ.

ಅನೇಕ ದಂಪತಿಗಳು ಕೆಲಸದ ಕಾರಣ, ಮಕ್ಕಳ ಕಾರಣದಿಂದ ದೂರವಿರುತ್ತಾರೆ. ಇದರಿಂದ ಅವರ ಸಂಬಂಧದಲ್ಲಿ ಪ್ರೀತಿ, ವಾತ್ಸಲ್ಯ ಕಡಿಮೆಯಾಗುತ್ತದೆ. ಹಾಗಾಗಿ ನೀವು ಒಟ್ಟಿಗೆ ಸಮಯ ಕಳೆಯಿರಿ. ನಿಮ್ಮ ಸಂಗಾತಿಗಾಗಿ ಸ್ವಲ್ಪ ಸಮಯ ನೀಡಲು ಪ್ರಯತ್ನಿಸಿ.

ಸಂಬಂಧದಲ್ಲಿ ಪ್ರೀತಿಯನ್ನು ಮರಳಿ ತರಲು ನೀವು ಒಟ್ಟಿಗೆ ಪ್ರಯಾಣ ಬೆಳೆಸಿ. ಇದಕ್ಕಾಗಿ ಲಾಂಗ್ ಟ್ರಿಪ್ ಹೋಗಿ. ಅಥವಾ ವೀಕೆಂಡ್ ಔಟಿಂಗ್, ಪಿಕ್ನಿಕ್, ಅಥವಾ ಹೊರಗಡೆ ಡಿನ್ನರ್ ಗೆ ಹೋಗಿ.

ಹಾಗೇ ಯಾವುದೇ ಸಮಸ್ಯೆಗಳಿದ್ದರೂ ಪರಸ್ಪರರು ಒಟ್ಟಿಗೆ ಕುಳಿತು ಅದರ ಬಗ್ಗೆ ಮಾತನಾಡಿ. ಅದಕ್ಕೆ ಪರಿಹಾರ ಕಂಡುಕೊಳ್ಳಿ. ಇದರಿಂದ ನಿಮ್ಮ ಸಂಬಂಧ ಗಟ್ಟಿಗೊಳ್ಳುತ್ತದೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...