Kannada Duniya

ನಿಮ್ಮ ಮನೆಯಲ್ಲಿ ಧನಾತ್ಮಕ ಶಕ್ತಿ ತುಂಬಬೇಕೆ….? ಇಲ್ಲಿದೆ ನೋಡಿ ಟಿಪ್ಸ್!

ಪಾಸಿಟಿವ್ ಎನರ್ಜಿ, ವೈಬ್ರೇಷನ್ ಗಳನ್ನು ನೀವು ನಂಬುವವರಾದರೆ ಈ ಲೇಖನ ಓದಿ. ಮನೆಯೊಳಗಿನ ಈ ಕೆಲವು ಸಂಗತಿಗಳೇ ಪಾಸಿಟಿವ್ ಎನರ್ಜಿಯನ್ನು ಹೆಚ್ಚಿಸುತ್ತದೆ ಎನ್ನುತ್ತದೆ ವಾಸ್ತುಶಾಸ್ತ್ರ.

ಆರೋಗ್ಯಪೂರ್ಣ ಮನಸ್ಥಿತಿ ಹಾಗೂ ನೆಮ್ಮದಿಯ ಬದುಕು ಬೇಕಿದ್ದರೆ ನೀವು ವಾಸಿಸುವ ಸ್ಥಳವನ್ನು ಮೊದಲು ಕಸಮುಕ್ತಗೊಳಿಸಿ. ಅಂದರೆ ಎಲ್ಲಾ ವಸ್ತುಗಳನ್ನು ನೀಟಾಗಿ ಜೋಡಿಸಿಡಿ. ಕಸ ಗುಡಿಸುವ ಹಾಗೂ ಒರೆಸುವ ಕೆಲಸಗಳನ್ನು ನಿತ್ಯ ಮಾಡಿ. ಆಗ ಮಾತ್ರ ಮನೆಯಲ್ಲಿ ಧನಾತ್ಮಕ ಶಕ್ತಿಯ ಹರಿವು ಹೆಚ್ಚುತ್ತದೆ.

ಪಂಚಭೂತಗಳ ಅಂದರೆ ನೀರಿನ ಹರಿವಿನ, ಭೂಮಿಯ ವಿಸ್ತಾರದ, ಆಕಾಶದ ತತ್ವಗಳನ್ನು ಬಿಂಬಿಸುವ ಚಿತ್ರಗಳನ್ನು ಮನೆಯಲ್ಲಿಡಿ. ಇವು ಸೌಹಾರ್ದತೆಯನ್ನು ಸಮತೋಲನದಲ್ಲಿಟ್ಟು ಪವಿತ್ರ ವಾತಾವರಣವನ್ನು ನಿರ್ಮಿಸುತ್ತದೆ.

ಮಲಗುವ ಕೋಣೆಯಲ್ಲಿ ಈಶಾನ್ಯ ದಿಕ್ಕಿಗೆ ತಲೆ ಹಾಕಿ ಮಲಗುವಂತೆ ಬೆಡ್ ಸೆಟ್ ಮಾಡಿಕೊಳ್ಳಿ. ಮನೆಯೊಳಗೆ ನೈಸರ್ಗಿಕ ಗಾಳಿ, ಬೆಳಕಿನ ಹರಿವಿಗೆ ಆಸ್ಪದ ನೀಡಿ. ಗುಲಾಬಿ ಸ್ಪಟಿಕ ಶಿಲೆಯನ್ನು ಮನೆಯಲ್ಲಿ ಇಟ್ಟುಕೊಳ್ಳುವುದರಿಂದ ಪ್ರೀತಿ ಹಾಗೂ ಸೌಹಾರ್ದತೆ ಹೆಚ್ಚುತ್ತದೆ ಎನ್ನಲಾಗಿದೆ.

 


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...