Kannada Duniya

ಮಂಗಳದೋಷವನ್ನು ನಿವಾರಿಸಲು ಇವುಗಳನ್ನು ಪೂಜಿಸಿ

ವ್ಯಕ್ತಿಯ ಜಾತಕದಲ್ಲಿ ಮಂಗಳನು ಎಂಟನೇ ಮನೆಯಲ್ಲಿದ್ದಾಗ ಮಂಗಳ ದೋಷ ಕಾಡುತ್ತದೆ. ಮಂಗಳದೋಷವಿದ್ದಾಗ ಜೀವನದಲ್ಲಿ ಅನೇಕ ಅಡೆತಡೆಗಳು ಎದುರಾಗುತ್ತದೆ. ವ್ಯಕ್ತಿಯ ಮದುವೆ ವಿಚಾರದಲ್ಲಿ ಅಡೆತಡೆಗಳು ಎದುರಾಗುತ್ತದೆ. ಹಾಗಾಗಿ ಮಂಗಳದೋಷವನ್ನು ನಿವಾರಿಸಲು ಇವುಗಳನ್ನು ಪೂಜಿಸಿ.

ಮಂಗಳದೋಷವನ್ನು ನಿವಾರಿಸಲು ಪ್ರತಿದಿನ ಅದರಲ್ಲೂ ಮಂಗಳವಾರದಂದು ತಪ್ಪದೇ ಹನುಮಂತನನ್ನು ಪೂಜಿಸಿ. ಹನುಮ ಚಾಲೀಸ್ ಅನ್ನು ಪಠಿಸಿ. ಹನುಮಂತನಿಗೆ ವೀಳ್ಯದೆಲೆಯ ಹಾರವನ್ನು ಅರ್ಪಿಸಿ.

ಬೇವಿನ ಮರ, ಅರಳೀಮರ ಅಥವಾ ಆಲದ ಮರವನ್ನು ಪೂಜಿಸಿದರೆ ಒಳ್ಳೆಯದು. ಇವುಗಳಲ್ಲಿ ದೇವರುಗಳು ನೆಲೆಸಿರುತ್ತಾರೆ ಎಂಬ ನಂಬಿಕೆ ಇದೆ. ಹಾಗೇ ಮರಗಳಿಗೆ ಪೂಜೆಯ ವೇಳೆ ನೀರನ್ನು ಅರ್ಪಿಸಿ.

ಮಾಂಸ, ಮದ್ಯವನ್ನು ತ್ಯಜಿಸಿ. ಹವಳವನ್ನು ಧರಿಸಿದರೆ ಮಂಗಳದೋಷವನ್ನು ನಿವಾರಿಸಬಹುದು. ಹಾಗೇ ಸಹೋದರ ಸಹೋದರಿಯೊಂದಿಗೆ ಜಗಳವಾಡವುದನ್ನು ತಪ್ಪಿಸಿ. ಅದಕ್ಕಾಗಿ ಕೋಪವನ್ನು ನಿಯಂತ್ರಿಸಿ.

ಈ ಮೌತ್ ವಾಶ್ ಬಾಯಿಯ ದುರ್ಗಂಧ ಹೋಗಲಾಡಿಸುವುದರ ಜೊತೆಗೆ ಬ್ಯಾಕ್ಟೀರಿಯಾಗಳನ್ನು ನಾಶ ಮಾಡುತ್ತದೆ…!

ಹಾಗೇ ಸಿರಿಧಾನ್ಯಗಳು, ರಕ್ತ ಚಂದನ, ಕೆಂಪು ಹೂಗಳು , ಸಿಹಿತಿಂಡಿಗಳನ್ನು ಕೆಂಪು ಬಟ್ಟೆಯಲ್ಲಿ ಸುತ್ತಿ ನದಿಯಲ್ಲಿ ಹರಿದು ಬಿಡುವುದರಿಂದ ಮಂಗಳದೋಷ ನಿವಾರಣೆಯಾಗುತ್ತದೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...