Kannada Duniya

ಮೇಷ ರಾಶಿಯಲ್ಲಿ ಬುಧ-ಗುರುವಿನ ಸಂಯೋಗ; ಈ ರಾಶಿಯವರ ಪ್ರತಿಷ್ಠೆ ಹೆಚ್ಚಾಗಲಿದೆಯಂತೆ

ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಗ್ರಹಗಳು ಸಂಚರಿಸುವಾಗ ಒಂದಕ್ಕೊಂದು ಸಂಯೋಗವಾಗುತ್ತಿದೆ. ಇದರಿಂದ ಶುಭ, ಅಶುಭ ಪರಿಣಾಮ ಬೀರುತ್ತದೆ. ಅದರಂತೆ ಗುರುವು ಈಗಾಗಲೇ ಮೇಷರಾಶಿಯಲ್ಲಿದ್ದು, ಮಾರ್ಚ್ 7ರಂದು ಬುಧನು ಮೇಷ ರಾಶಿಗೆ ಪ್ರವೇಶಿಸಲಿದ್ದಾನೆ. ಇದರಿಂದ ಮೇಷರಾಶಿಯಲ್ಲಿ ಬುಧ-ಗುರುವಿನ ಸಂಯೋಗವಾಗಿ ಈ ರಾಶಿಯವರಿಗೆ ಒಳ್ಳೆಯದಾಗಲಿದೆಯಂತೆ.

ಮೀನ ರಾಶಿ : ನೀವು ಆಕಸ್ಮಕ ಹಣವನ್ನು ಪಡೆಯುತ್ತೀರಿ. ನಿಮ್ಮ ಧೈರ್ಯ, ಶೌರ್ಯ ಹೆಚ್ಚಾಗಲಿದೆ. ಹಣ ಸಂಬಂಧಿಸಿದ ನಿಮ್ಮ ಹಣ ಯೋಜನೆ ಯಶಸ್ವಿಯಾಗಲಿದೆ. ನೀವು ಗುರುವಿನ ಪ್ರಭಾವದಿಂದ ವೃತ್ತಿ ಜೀವನದಲ್ಲಿ ಹೊಸ ಅವಕಾಶಗಳನ್ನು ಪಡೆಯುತ್ತೀರಿ.

ಮೇಷ ರಾಶಿ : ನೀವು ಹೊಸ ಜನರೊಂದಿಗೆ ಸಂಬಂಧವನ್ನು ಹೊಂದುತ್ತೀರಿ. ವಿವಾಹಿತರ ಜೀವನವು ಸುಖಕರವಾಗಿರುತ್ತದೆ. ಅವಿವಾಹಿತರಿಗೆ ಮದುವೆಯ ಪ್ರಸ್ತಾಪ ಕೂಡಿ ಬರಲಿದೆ. ನಿಮ್ಮ ಕುಟುಂಬದಲ್ಲಿ ಶಾಂತಿ ನೆಲೆಸಿರುತ್ತದೆ. ಹೊಸ ಆಸ್ತಿಯನ್ನು ಖರೀದಿಸುವವರಿಗೆ ಇದು ಉತ್ತಮ ಸಮಯ.

ಧನು ರಾಶಿ : ನೀವು ಮಕ್ಕಳಿಗೆ ಸಂಬಂಧಿಸಿದಂತೆ ಒಳ್ಳೆಯ ಸುದ್ದಿಯನ್ನು ಪಡೆಯುತ್ತೀರಿ. ನೀವು ವೃತ್ತಿ ಜೀವನದಲ್ಲಿ ಉತ್ತಮ ಫಲಿತಾಂಶವನ್ನು ಪಡೆಯುತ್ತೀರಿ. ನೀವು ವ್ಯವಹಾರದಲ್ಲಿ ಯಶಸ್ಸನ್ನು ಪಡೆಯುತ್ತೀರಿ. ಪ್ರೇಮ ಸಂಬಂಧದಲ್ಲಿರುವವರಿಗೆ ಮದುವೆಯಾಗಬಹುದು.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...