Kannada Duniya

ಜನವರಿ 15ರಂದು ಮಕರ ರಾಶಿಯಲ್ಲಿ ಬುಧಾದಿತ್ಯ ಯೋಗ ರಚನೆ; ಈ ರಾಶಿಯವರಿಗೆ ಒಳ್ಳೆಯದಾಗಲಿದೆಯಂತೆ

ಗ್ರಹಗಳು ತನ್ನ ಸ್ಥಾನವನ್ನು ಬದಲಾಯಿಸಿದಾಗ ಅಥವಾ ಒಂದು ರಾಶಿಯಲ್ಲಿ 2 ಗ್ರಹಗಳು ಸಂಯೋಗಗೊಂಡಾಗ ಅದರಿಂದ ಯೋಗಗಳು ರಚನೆಯಾಗಲಿದೆ.

ಇದು ಕೆಲವು ರಾಶಿಯವರಿಗೆ ಶುಭವನ್ನುಂಟುಮಾಡುತ್ತದೆ. ಅದರಂತೆ ಜನವರಿ 15ರಂದು ಮಕರ ರಾಶಿಗೆ ಸೂರ್ಯನು ಪ್ರವೇಶಿಸಲಿದ್ದಾನೆ. ಈಗಾಗಲೇ ಅಲ್ಲಿ ಬುಧ ಇರುವ ಕಾರಣ ಬುಧಾದಿತ್ಯ ಯೋಗ ರಚನೆಯಾಗಲಿದೆ. ಇದರಿಂದ ಈ ರಾಶಿಯವರಿಗೆ ಒಳ್ಳೆಯದಾಗಲಿದೆಯಂತೆ.

ಧನು ರಾಶಿ : ನಿಮ್ಮ ಸಂಪತ್ತು ಹೆಚ್ಚಾಗಲಿದೆ. ನೀವು ಆಕಸ್ಮಿಕವಾಗಿ ಹಣದ ಲಾಭವನ್ನು ಪಡೆಯುತ್ತೀರಿ. ನೀವು ವ್ಯಾಪಾರದಲ್ಲಿ ಅಭಿವೃದ್ಧಿಯನ್ನು ಕಾಣುತ್ತೀರಿ.

ವೃಷಭ ರಾಶಿ : ನಿಮ್ಮ ಅದೃಷ್ಟ ಹೆಚ್ಚಾಗಲಿದೆ. ತಂದೆಯೊಂದಿಗೆ ನಿಮ್ಮ ಸಂಬಂಧ ಉತ್ತಮವಾಗಿರಲಿದೆ. ನೀವು ಹೊಸ ವ್ಯವಹಾರ ಮಾಡಲು ಇದು ಉತ್ತಮ ಸಮಯ. ನೀವು ವಿದೇಶಕ್ಕೆ ಪ್ರಯಾಣ ಬೆಳೆಸಬಹುದು.

ಮೇಷ ರಾಶಿ : ನೀವು ಉದ್ಯೋಗ ಮತ್ತು ವ್ಯವಹಾರದಲ್ಲಿ ಪ್ರಗತಿ ಕಾಣುತ್ತೀರಿ. ಸರ್ಕಾರಿ ಕೆಲಸಕ್ಕಾಗಿ ಹುಡುಕಾಟ ನಡೆಸುತ್ತಿರುವವರಿಗೆ ಇದು ಉತ್ತಮ ಸಮಯ. ನಿಮ್ಮ ಗೌರವ ಮತ್ತು ಪ್ರತಿಷ್ಠೆ ಹೆಚ್ಚಾಗಲಿದೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...