Kannada Duniya

Prevent cold ,cough: ಚಳಿಗಾಲದಲ್ಲಿ ಮಕ್ಕಳನ್ನು ಕಾಡುವ ಶೀತ, ಕಫ ದಿಂದ ದೂರವಿರಿಸಲು ಈ ಮನೆಮದ್ದನ್ನು ನೀಡಿ…!

ಚಳಿಗಾಲದ ಸಮಯದಲ್ಲಿ ಅನೇಕ ಮಕ್ಕಳಲ್ಲಿ ಶೀತ, ಜ್ವರ, ಕಫದ ಸಮಸ್ಯೆ ಕಾಡುತ್ತದೆ. ಹಾಗಾಗಿ ಇಂತಹ ವಾತಾವರಣದಲ್ಲಿ ಮಕ್ಕಳ ಬಗ್ಗೆ ಕಾಳಜಿವಹಿಸಿ. ಅದಕ್ಕಾಗಿ ಮಕ್ಕಳಿಗೆ ಪ್ರತಿದಿನ ಮಕ್ಕಳಿಗೆ ಈ ಮನೆಮದ್ದುಗಳನ್ನು ನೀಡಿ.

ಅರಿಶಿನ ಹಾಲು : ಚಳಿಗಾಲದಲ್ಲಿ ಮಕ್ಕಳಿಗೆ ತಪ್ಪದೇ ಅರಿಶಿನ ಮಿಶ್ರಿತ ಹಾಲು ನೀಡಿ. ಇದನ್ನು ಪ್ರತಿದಿನ ನೀಡಿ, ಇದರಿಂದ ಮಕ್ಕಳಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಬ್ಯಾಕ್ಟೀರಿಯಾಗಳಿಂದ ರಕ್ಷಿಸುತ್ತದೆ.

ಓಂಕಾಳು ಕಷಾಯ : ಇದು ಶೀತ, ಕಫದಿಂದ ಮಕ್ಕಳನ್ನು ರಕ್ಷಿಸುತ್ತದೆ. 1 ಗ್ಲಾಸ್ ನೀರಿಗೆ 1 ಚಮಚ ಓಂ ಕಾಳಿನ ಬೀಜಗಳನ್ನು ಹಾಕಿ ಚೆನ್ನಾಗಿ ಕುದಿಸಿ. ಉಗುರು ಬೆಚ್ಚಗಿರುವಾಗಲೇ ಮಕ್ಕಳಿಗೆ ನೀಡಿ.

Papaya in winter: ಚಳಿಗಾಲದಲ್ಲಿ ಪಪ್ಪಾಯ ಸೇವನೆ ಪ್ರಯೋಜನಕಾರಿಯೇ…?

ಗಿಡಮೂಲಿಕೆ ಮಿಶ್ರಿತ ಕಷಾಯ: ಮಕ್ಕಳನ್ನು ರೋಗಗಳಿಂದ ಕಾಪಾಡಲು ತುಳಸಿ, ದಾಲ್ಚಿನ್ನಿ, ಲವಂಗ, ಕರಿಮೆಣಸು ಮತ್ತು ಶುಂಠಿ ಸೇರಿಸಿ ಕಷಾಯ ತಯಾರಿಸಿ. ಇದನ್ನು ಮಕ್ಕಳಿಗೆ ದಿನಕ್ಕೆ 1 ಬಾರಿ ಕುಡಿಯಲು ನೀಡಿ. ಇದರಿಂದ ಮಕ್ಕಳು ಆರೋಗ್ಯವಾಗಿರುತ್ತಾರೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...