Kannada Duniya

ಮೈಗ್ರೇನ್ ಸಮಸ್ಯೆಯನ್ನು ತೊಡೆದುಹಾಕಲು ನಿಂಬೆ ಎಲೆಗಳನ್ನು ಬಳಸಿ…!

ಒತ್ತಡದಿಂದಾಗಿ ಮೈಗ್ರೇನ್ ಸಮಸ್ಯೆ ಕಾಡುತ್ತದೆ. ಇದು ತಲೆಯಲ್ಲಿ ತೀವ್ರವಾದ ನೋವನ್ನುಂಟುಮಾಡುತ್ತದೆ. ಈ ನೋವು ಹಲವಾರು ಗಂಟೆಗಳ ಕಾಲ ನಿರಂತರವಾಗಿ ಕಾಡುತ್ತದೆ. ಈ ಸಮಯದಲ್ಲಿ ತಲೆತಿರುಗುವಿಕೆ, ವಾಕರಿಕೆ, ವಾಂತಿ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಹಾಗಾಗಿ ಈ ಮೈಗ್ರೇನ್ ಸಮಸ್ಯೆಯನ್ನು ನಿವಾರಿಸಲು ನಿಂಬೆ ಎಲೆಗಳನ್ನು ಬಳಸಿ.

ನಿಂಬೆಯಲ್ಲಿ ಹಲವು ಔಷಧೀಯ ಗುಣಗಳಿವೆ. ಅದು ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ. ಇದರಲ್ಲಿ ತಾಮ್ರ, ಪೊಟ್ಯಾಸಿಯಂ, ಕಬ್ಬಿಣ, ವಿಟಮಿನ್ ಎ, ಸಿ, ಕ್ಯಾಲ್ಸಿಯಂ, ಪ್ರೋಬಯಾಟಿಕ್ ಬ್ಯಾಕ್ಟೀರಿಯಾ ಸೇರಿದಂತೆ ಅನೇಕ ಪೋಷಕಾಂಶಗಳಿವೆ. ಹಾಗಾಗಿ ನಿಂಬೆ ರೋಗನಿರೋಧಕ ಶಕ್ತಿಯನ್ನು ಬಲಗೊಳಿಸುತ್ತದೆ.

ಜ್ವರ ಬಂದಾಗ ಅಶ್ವಗಂಧವನ್ನು ಸೇವಿಸಿದರೆ ಏನಾಗುತ್ತದೆ ಗೊತ್ತಾ…?

ಅಲ್ಲದೇ ಸಂಶೋಧನೆಯ ಪ್ರಕಾರ ನಿಂಬೆಯಲ್ಲಿರುವ ಸಿಟ್ರಸ್ ಮೈಗ್ರೇನ್ ಅನ್ನು ತ್ವರಿತವಾಗಿ ಪರಿಹರಿಸುತ್ತದೆ. ಇದನ್ನು ಇರಾನ್ ನಲ್ಲಿ ಚಿಕಿತ್ಸೆಯಾಗಿ ಬಳಸಲಾಗುತ್ತದೆ. ಹಾಗೇ ನಿಂಬೆ ಎಲೆಗಳನ್ನು ಕೂಡ ಮೈಗ್ರೇನ್ ಗೆ ಚಿಕಿತ್ಸೆಯಾಗಿ ನೀಡಬಹುದಂತೆ. ಕೆಲವು ನಿಂಬೆ ಎಲೆಗಳನ್ನು ತಲೆಯಲ್ಲಿ ನೋವು ಇರುವ ಕಡೆ ಹಚ್ಚಿದರೆ ಅಥವಾ ಅದರ ಎಲೆಗಳಿಂದ ಕಷಾಯ ತಯಾರಿಸಿ ಕುಡಿದರೆ ಮೈಗ್ರೇನ್ ಪರಿಹಾರವಾಗುತ್ತದೆ.

 

Lemon leaves act as excellent remedy for migraine headaches.

 


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...