Kannada Duniya

ಜ್ವರ ಬಂದಾಗ ಅಶ್ವಗಂಧವನ್ನು ಸೇವಿಸಿದರೆ ಏನಾಗುತ್ತದೆ ಗೊತ್ತಾ…?

ಅಶ್ವಗಂಧ ಒಂದು ಆಯುರ್ವೇದಿಕ್ ಔಷಧಿಯಾಗಿದೆ. ಇದು ಹಲವು ಆರೋಗ್ಯ ಪ್ರಯೋಜನವನ್ನು ಹೊಂದಿದ್ದು, ಅನೇಕ ಕಾಯಿಲೆಗಳ ಚಕಿತ್ಸೆಯಲ್ಲಿ ಬಳಸಲಾಗುತ್ತದೆ. ಇದನ್ನು ಮಾತ್ರೆ ಅಥವಾ ಪುಡಿ ರೂಪದಲ್ಲಿ ಸೇವಿಸುತ್ತಾರೆ. ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ, ವೈರಲ್ ಸೋಂಕಿನ ಅಪಾಯವನ್ನು ಕಡಿಮೆ ಮಾಡುತ್ತದೆ. ಆದರೆ ಇದನ್ನು ಆರೋಗ್ಯ ಸ್ಥಿತಿಗೆ ಅನುಗುಣವಾಗಿ ಸೇವಿಸಬೇಕು. ಇದನ್ನು ಕೆಲವೊಂದು ಸಂದರ್ಭಗಳಲ್ಲಿ ತಪ್ಪಿಸಬೇಕು.

ಆಯುರ್ವೇದದ ವೈದ್ಯರ ಪ್ರಕಾರ, ಜ್ವರದ ಬಂದ ಸಂದರ್ಭದಲ್ಲಿ ಅಶ್ವಗಂಧವನ್ನು ಸೇವಿಸಬಾರದು. ಇದು ಶೀತ ಮತ್ತು ಜ್ವರದಂತಹ ಸೋಂಕುಗಳ ವಿರುದ್ಧ ರಕ್ಷಿಸಲು ಸಹಾಯ ಮಾಡುತ್ತದೆ ನಿಜ. ಆದರೆ ಜ್ವರ ಇದ್ದಾಗ ಇದನ್ನು ಜೀರ್ಣಿಸಿಕೊಳ್ಳಲು ದೇಹಕ್ಕೆ ಕಷ್ಟವಾಗುತ್ತದೆ. ಯಾಕೆಂದರೆ ಜ್ವರದಿಂದ ದೇಹ ದುರ್ಬಲವಾಗಿರುತ್ತದೆ. ಹಾಗಾಗಿ ಜ್ವರ ಬಂದಾಗ ಅಶ್ವಗಂಧ ಸೇವಿಸಿದರೆ ಅಜೀರ್ಣವಾಗಿ ಅತಿಸಾರ, ವಾಂತಿ ಸಮಸ್ಯೆ ಕಾಡಬಹುದು.

Healthy metabolism : ನಿಮ್ಮ ಜೀರ್ಣಕ್ರಿಯೆ ಆರೋಗ್ಯವಾಗಿರಲು ನಿಮ್ಮ ಜೀವನದಲ್ಲಿ ಈ ಅಭ್ಯಾಸಗಳನ್ನು ಫಾಲೋ ಮಾಡಿ…!

ಹಾಗೇ ಅಶ್ವಗಂಧ ಆರೋಗ್ಯಕ್ಕೆ ಉತ್ತಮವಾದರೂ ಕೂಡ ಅದನ್ನು ಆಯುರ್ವೇದ ತಜ್ಞರ ಸಲಹೆಯ ಪ್ರಕಾರವೇ ಸೇವಿಸಬೇಕು. ಅತಿಯಾಗಿ ಸೇವಿಸಿದರೆ ಸರಿಯಾಗಿ ಜೀರ್ಣವಾಗದೆ ಹೊಟ್ಟೆ ನೋವು, ಅತಿಸಾರ ಮತ್ತು ವಾಂತಿ ಸಮಸ್ಯೆಗಳು ಕಾಡಬಹುದು ಮತ್ತು ಲಿವರ್ ಸಮಸ್ಯೆ ಉಂಟಾಗಬಹುದು.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...