Kannada Duniya

ತೂಕ ಇಳಿಸಲು ಈ ಹಸಿರು ತರಕಾರಿಯ ಜ್ಯೂಸ್ ಕುಡಿಯಿರಿ

ನಮ್ಮ ಕೆಟ್ಟ ಆಹಾರ ಪದ್ಧತಿಯಿಂದಾಗಿ ಹೆಚ್ಚಿ ಜನರಲ್ಲಿ ತೂಕ ಹೆಚ್ಚಳ ಮಸ್ಯೆ ಕಾಡುತ್ತಿದೆ. ಹಾಗಾಗಿ ಅದನ್ನು ಇಳಿಸಿಕೊಳ್ಳಲು ಜನರು ಹಲವಾರು ಮಾರ್ಗಗಳನ್ನು ಅನುಸರಿಸುತ್ತಾರೆ. ಆದರೆ ಈ ಹಸಿರು ತರಕಾರಿಗಳ ಜ್ಯೂಸ್ ಕುಡಿಯುವುದರಿಂದ ತೂಕವನ್ನು ಸುಲಭವಾಗಿ ಇಳಿಸಿಕೊಳ್ಳಬಹುದಂತೆ.

ಸೋರೆಕಾಯಿ : ಇದರಲ್ಲಿ ವಿಟಮಿನ್ ಎ, ಬಿ ಮತ್ತು ಸಿ ಇದೆ. ಇದು ಜೀರ್ಣಕ್ರಿಯೆಗೆ ಒಳ್ಳೆಯದು. ಇದು ಹೊಟ್ಟೆಯ ಸಮಸ್ಯೆಗಳನ್ನು ನಿವಾರಿಸುತ್ತದೆಯಂತೆ. ಇದರಲ್ಲಿ ಫೈಬರ್, ಪ್ರೋಟೀನ್ ಮತ್ತು ಪೊಟ್ಯಾಶಿಯಂ ಸಮೃದ್ಧವಾಗಿದ್ದು, ಇದು ಕೊಬ್ಬನ್ನು ಕಡಿಮೆ ಮಾಡುತ್ತದೆಯಂತೆ. ಇದರಿಂದ ಹೊಟ್ಟೆ ದೀರ್ಘಕಾಲ ತುಂಬಿರುತ್ತದೆಯಂತೆ.

ಪಾಲಕ್ ಜ್ಯೂಸ್ : ಇದರಲ್ಲಿ ಪೋಷಕಾಂಶಗಳು ಸಮೃದ್ಧವಾಗಿದೆ. ಇದರ ರಸ ಕುಡಿಯುವುದರಿಂದ ಹೊಟ್ಟೆ ದೀರ್ಘಕಾಲ ತುಂಬಿರುತ್ತದೆಯಂತೆ. ಇದು ಕಡಿಮೆ ಕ್ಯಾಲೋರಿಯನ್ನು ಹೊಂದಿದೆಯಂತೆ. ಇದನ್ನು ಆಹಾರದಲ್ಲಿ ಸೇರಿಸಿಕೊಳ್ಳುವುದರಿಂದ ತೂಕ ಇಳಿಕೆಯಾಗುತ್ತದೆಯಂತೆ.

ಸೌತೆಕಾಯಿ : ಇದು ದೇಹ ಮತ್ತು ಹೊಟ್ಟೆಯನ್ನು ತಂಪಾಗಿಡುತ್ತದೆಯಂತೆ. ಇದು ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳನ್ನು ನಿವಾರಿಸುತ್ತದೆಯಂತೆ. ಇದರಿಂದ ತೂಕ ನಿಯಂತ್ರಣದಲ್ಲಿರುತ್ತದೆಯಂತೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...