Kannada Duniya

Kids Health:ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಪೋಷಕರು ಮಾಡಬೇಕಾದದ್ದು ಏನು?

ಶಾಲೆ ಆಟ ಪಾಠಗಳಲ್ಲಿ ನಿರತರಾಗಬೇಕಿದ್ದ ಮಕ್ಕಳು ಈಗ ಮನೆಯಲ್ಲೇ ಮೊಬೈಲ್ ಇಲ್ಲವೇ ಕಂಪ್ಯೂಟರ್ ಮುಂದೆ ಕೂತು ದಿನ ಕಳೆಯುತ್ತಿದ್ದಾರೆ. ಹೀಗಾದಾಗ ಮೈಯಲ್ಲಿ ಅನಾವಶ್ಯಕ ಬೊಜ್ಜು ಬೆಳೆಯದೆ ಇರುತ್ತದೆಯೇ?

ಮಗುವಿನ ಕಲಿಕೆಗೆ, ಓದು ಬರೆಯುವ ಸಮಯಕ್ಕೆ ಟೈಮ್ ಟೇಬಲ್ ಹಾಕುವಂತೆ ಆಟವಾಡುವ ಸಮಯಕ್ಕೂ ಟೈಮ್ ಟೇಬಲ್ ಮಾಡಿ. ಸ್ಕಿಪ್ಪಿಂಗ್, ಜಂಪಿಂಗ್, ಮೆಟ್ಟಿಲು ಹತ್ತಿ ಇಳಿಯುವ ಕೆಲಸದಲ್ಲಿ ಮಕ್ಕಳನ್ನು ತೊಡಗಿಕೊಳ್ಳುವಂತೆ ಮಾಡಿ. ದಿನಕ್ಕೊಮ್ಮೆಯಾದರೂ ದೇಹ ಬೆವರಲು ಬಿಡಿ.

ಬೆಳೆಯುವ ಮಕ್ಕಳಿಗೆ ಸಾಕಷ್ಟು ನಿದ್ದೆಯೂ ಬಹಳ ಮುಖ್ಯ. ಎಚ್ಚರವಿದ್ದಾಗ ಮಗು ಚುರುಕಾಗಿರಬೇಕಾದರೆ ಸಾಕಷ್ಟು ನಿದ್ದೆ ಮಾಡಿರಬೇಕು. ಇಲ್ಲವಾದರೆ ಜಡತ್ವ ಮೈಗೆ ಅಂಟಿಕೊಳ್ಳುತ್ತದೆ. ಮಗು ಮಲಗಲು ಮತ್ತು ಏಳಲು ನಿರ್ದಿಷ್ಟ ಸಮಯವನ್ನು ನಿಗದಿಪಡಿಸಿಡಿ. ಕತೆ ಹೇಳುವ ಮೂಲಕ ಮಕ್ಕಳನ್ನು ಮಲಗಿಸಿ.

Relationship: ಆರೋಗ್ಯಕರ ಸಂಬಂಧವನ್ನು ಹೊಂದುವುದರಿಂದ ಈ ಪ್ರಯೋಜನಗಳನ್ನು ಪಡೆಯಬಹುದು

ಸಮಯಕ್ಕೆ ಸರಿಯಾಗಿ ಊಟ ಮಾಡಿಸಿ. ಜಂಕ್ ಫುಡ್ ಮಕ್ಕಳು ಇಷ್ಟಪಡುತ್ತಾರೆ ಎಂಬುದೇನೋ ನಿಜ. ಹಾಗೆಂದು ನಿತ್ಯ ಮಕ್ಕಳಿಗೆ ತಿನ್ನಲು ಕೊಡಬೇಡಿ. ಜಂಕ್ ಫುಡ್ ಗಾಗಿಯೇ ದಿನ ನಿಗದಿಪಡಿಸಿ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...