Kannada Duniya

ಮೂಳೆಗಳು ಗಟ್ಟಿಗೊಳ್ಳಲು ರಾತ್ರಿ ಹಾಲಿನಲ್ಲಿ ಈ ಸಣ್ಣ ಬೀಜಗಳನ್ನು ಬೆರೆಸಿ ಕುಡಿಯಿರಿ

ಮೂಳೆಗಳು ಬಲಗೊಳ್ಳಲು ಕ್ಯಾಲ್ಸಿಯಂ ಅಗತ್ಯವಾಗಿ ಬೇಕು. ಜನರು ಕ್ಯಾಲ್ಸಿಯಂ ಕೊರತೆಯಿಂದಾಗಿ ಹಲವಾರು ಮೂಳೆಗಳಿಗೆ ಸಂಬಂಧಿಸಿದ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಹಾಗಾಗಿ ಅಂತವರು ಪ್ರತಿದಿನ ರಾತ್ರಿ ಮಲಗುವ ಮುನ್ನ ಹಾಲಿನಲ್ಲಿ ಗಸೆಗಸೆಯನ್ನು ಬೆರೆಸಿ ಕುಡಿಯಿರಿ.

ಗಸೆಗಸೆಯಲ್ಲಿ ಕ್ಯಾಲ್ಸಿಯಂ, ಫೈಬರ್ , ಒಮೆಗಾ 3, 6 ಮತ್ತು ಪ್ರೋಟೀನ್ ಗಳು ಸಮೃದ್ಧವಾಗಿದೆ. ಹಾಗಾಗಿ ಇದನ್ನು ಪ್ರತಿದಿನ ರಾತ್ರಿ ಮಲಗುವ ಮುನ್ನ ಹಾಲಿನಲ್ಲಿ ಬೆರೆಸಿ ಕುಡಿದರೆ ಮೂಳೆಗೆ ಸಂಬಂಧಿಸಿದ ಸಮಸ್ಯೆಗಳು ಕಾಡುವುದಿಲ್ಲ.

ಅಲ್ಲದೇ ಗಸೆಗಸೆಯನ್ನು ಹಾಲಿನೊಂದಿಗೆ ಬೆರೆಸಿ ಕುಡಿಯುವುದರಿಂದ ಎಲ್ಲಾ ರೀತಿಯ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ನಿವಾರಣೆಯಾಗುತ್ತದೆ. ಆಹಾರವು ಬೇಗನೆ ಜೀರ್ಣವಾಗುತ್ತದೆ. ಅಲ್ಲದೇ ಇದನ್ನು ಕುಡಿಯುವುದರಿಂದ ರಕ್ತದೊತ್ತಡ ನಿಯಂತ್ರಣದಲ್ಲಿರುತ್ತದೆ.

ಹಾಗೇ ಮಲಗುವ ಮುನ್ನ ಗಸೆಗಸೆ ಹಾಲನ್ನು ಕುಡಿದರೆ ನಿದ್ರೆ ಚೆನ್ನಾಗಿ ಬರುತ್ತದೆ. ಯಾಕೆಂದರೆ ಇದು ಮೆದುಳಿನ ಕೋಶಗಳನ್ನು ಶಾಂತಗೊಳಿಸುತ್ತದೆ. ಇದರಿಂದ ಮನಸ್ಸು ಶಾಂತವಾಗಿರುತ್ತದೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...