Kannada Duniya

ಮಲಗುವ ಮುನ್ನ ಈ ಹಣ್ಣು ತಿಂದರೆ ಉತ್ತಮ ನಿದ್ರೆ ಬರುತ್ತದೆಯಂತೆ

ನಿದ್ರೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಹಾಗಾಗಿ ವೈದ್ಯರು ದಿನಕ್ಕೆ 8ಗಂಟೆಗಳ ಕಾಲ ನಿದ್ರಿಸುವಂತೆ ಸಲಹೆ ನೀಡುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಕೆಲಸದ ಒತ್ತಡದಿಂದ ಹೆಚ್ಚಿನ ಜನರು ನಿದ್ರಾಹೀನತೆ ಸಮಸ್ಯೆಗೆ ಒಳಗಾಗುತ್ತಿದ್ದಾರೆ. ಹಾಗಾಗಿ ನಿಮಗೆ ನಿದ್ರೆ ಚೆನ್ನಾಗಿ ಬರಲು ರಾತ್ರಿ ಈ ಹಣ್ಣನ್ನು ತಿನ್ನಬೇಕಂತೆ.

ತಜ್ಞರು ತಿಳಿಸಿದ ಪ್ರಕಾರ, ನಿದ್ರೆ ಚೆನ್ನಾಗಿ ಬರಲು ಟ್ರಿಪ್ಟೊಫಾನ್ ಇರುವ ಆಹಾರ ಸೇವಿಸಬೇಕಂತೆ. ಈ ಅಂಶ ಬಾಳೆಹಣ್ಣಿನಲ್ಲಿ ಇರುವುದು ಕಂಡುಬಂದಿದೆ. ಹಾಗಾಗಿ ತಜ್ಞರು ತಿಳಿಸಿದ ಪ್ರಕಾರ ರಾತ್ರಿ ಬಾಳೆಹಣ್ಣು ತಿಂದು ಮಲಗುವುದರಿಂದ ನಿದ್ರೆ ಚೆನ್ನಾಗಿ ಬರುತ್ತದೆಯಂತೆ.

ಟ್ರಿಪ್ಟೊಫಾನ್ ಅಮೈನೋ ಆಮ್ಲವಾಗಿದ್ದು, ಇದು ದೇಹದಲ್ಲಿ ಸಿರೊಟೋನಿನ್ ಮತ್ತು ಮೆಲಟೋನಿನ್ ಎಂಬ ಹಾರ್ಮೋನ್ ಅನ್ನು ಉತ್ಪಾದಿಸುತ್ತದೆಯಂತೆ. ಇದು ನಿದ್ರೆ ಸುಲಭವಾಗಿ ಬರಲು ಸಹಾಯ ಮಾಡುತ್ತದೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...