Kannada Duniya

ಪ್ರಯಾಣದಲ್ಲಿ ಮಕ್ಕಳು ವಾಂತಿ ಮಾಡುವುದೇಕೆ?

ಕಾರು ಅಥವಾ ಬಸ್ಸಿನಲ್ಲಿ ಪ್ರಯಾಣಿಸುವಾಗ ಮಕ್ಕಳು ವಾಂತಿ ಮಾಡುವುದುಂಟು. ಇದು ನಿಮ್ಮ ಪ್ರವಾಸದ ಮೂಡ್ ಅನ್ನೇ ಹಾಳು ಮಾಡಿಬಿಡಬಹುದು. ಸಾಮಾನ್ಯವಾಗಿ 2ರಿಂದ 12 ವರ್ಷದೊಳಗಿನ ಮಕ್ಕಳು ಮೋಷನ್ ಸಿಕ್ ನೆಸ್ ನಿಂದ ಬಳಲುತ್ತಾರೆ. ಇದು ಕೆಲವರಲ್ಲಿ ಮಾತ್ರ ಕಾಣಿಸಿಕೊಳ್ಳುತ್ತದೆ.

ಇದನ್ನು ತಪ್ಪಿಸಲು ಈ ಕೆಲವು ಸರಳ ಟಿಪ್ಸ್ ಗಳು ನೆರವಾಗುತ್ತವೆ. ದೀರ್ಘ ಪ್ರಯಾಣ ಹೊರಟಿದ್ದರೆ, ನೀವು ಹೊರಡುವ ಕನಿಷ್ಠ ಅರ್ಧ ಗಂಟೆ ಮೊದಲು ಆಹಾರಗಳನ್ನು ಮಕ್ಕಳಿಗೆ ನೀಡದಿರಿ. ಇದು ಅವರ ಹೊಟ್ಟೆಯನ್ನು ಭಾರವಾಗಿಸುತ್ತದೆ. ಎಣ್ಣೆಯಲ್ಲಿ ಕರಿದ ಆಹಾರಗಳು, ಖಾರದ ತಿನಿಸುಗಳನ್ನು ನೀಡದಿರಿ.

ಮಕ್ಕಳು ಕಾರಿನಲ್ಲಿ ಪ್ರಯಾಣಿಸುವಾಗ ಅವರಿಗಿಷ್ಟದ ಆಟಗಳನ್ನು ಆಡಿಸಿ. ಮೊಬೈಲ್ ಕೈಗೆ ನೀಡುವ ಬದಲು ಹೊರಗೆ ನೋಡುವಂತೆ ಹೇಳಿ. ಇಲ್ಲವಾದರೆ ಮಲಗಿ ನಿದ್ದೆ ಮಾಡಲಿ. ಇದು ಹೆಚ್ಚು ಆರಾಮದಾಯಕ.

ಕನಿಷ್ಠ ಎರಡು ಗಂಟೆಗೊಮ್ಮೆ ಕಾರು ನಿಲ್ಲಿಸಿ, ಮಕ್ಕಳನ್ನು ಕೆಳಗಿಳಿಸಿ ಶೌಚಾಲಯ ಮಾಡಿಸಿ, ನೀರು ಇಲ್ಲವೇ ಲೈಟ್ ಫುಡ್ ತಿನ್ನಲು ಕೊಡಿ. ಇದು ಕಾರಿನಲ್ಲಿ ಉಸಿರುಗಟ್ಟುವ ವಾತಾವರಣದಿಂದ ರಿಲ್ಯಾಕ್ಸ್ ಆಗಿಸುತ್ತದೆ.

 


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...