Kannada Duniya

ಮಗುವಿಗೆ ಅತಿಸಾರದ ಸಮಸ್ಯೆ ಕಾಡಿದರೆ ಈ ಮನೆಮದ್ದನ್ನು ಬಳಸಿ

ಮಗುವಿನ ಜೀರ್ಣಕ್ರಿಯೆ ದುರ್ಬಲವಾಗಿರುತ್ತದೆ. ಹಾಗಾಗಿ ಯಾವುದೇ ಆಹಾರವನ್ನು ಸೇವಿಸಿದಾಗ ಮಕ್ಕಳಿಗೆ ಅತಿಸಾರದಂತಹ ಸಮಸ್ಯೆಗಳು ಕಾಡುತ್ತದೆ. ಹಾಗಾಗಿ ಈ ಸಮಸ್ಯೆಯನ್ನು ನಿವಾರಿಸಲು ಔಷಧಿಗಳ ಬದಲು ಮೊದಲು ಈ ಮನೆಮದ್ದನ್ನು ಬಳಸಿ.

ನಿಂಬೆ ನೀರು : ಮಗುವಿಗೆ ಆಗಾಗ ಮಲವಿಸರ್ಜನೆಯಾಗುತ್ತಿದ್ದರೆ ದೇಹದಲ್ಲಿ ಉಪ್ಪು ಮತ್ತು ನೀರಿನ ಕೊರತೆಯಾಗುತ್ತದೆ, ಹಾಗಾಗಿ ಮಕ್ಕಳಿಗೆ ನೀರಿಗೆ ನಿಂಬೆರಸ ಉಪ್ಪು ಮತ್ತು ಸಕ್ಕರೆ ಮಿಕ್ಸ್ ಮಾಡಿ ಕುಡಿಸಿರಿ.

ಎಳನೀರು : ಇದು ಮಗುವನ್ನು ಹೈಡ್ರೇಟ್ ಆಗಿಡುತ್ತದೆ. ಎಳನೀರಿನಲ್ಲಿ ಹಲವು ಪೋಷಕಾಂಶಗಳಿದ್ದು, ಇದು ಅತಿಸಾರದ ಸಮಸ್ಯೆಯನ್ನು ನಿವಾರಿಸುತ್ತದೆ.

ಬಾಳೆಹಣ್ಣು : ಇದರಲ್ಲಿ ನಾರಿನಾಂಶವಿದೆ. ಮತ್ತು ಇದು ಸುಲಭವಾಗಿ ಜೀರ್ಣವಾಗುತ್ತದೆ. ಹಾಗಾಗಿ ಮಗುವಿಗೆ ಅತಿಸಾರದ ಸಮಸ್ಯೆ ಇದ್ದಾಗ ಬಾಳೆಹಣ್ಣನ್ನು ನೀಡಿ.

ಮೊಸರು : ಇದರಲ್ಲಿ ಉತ್ತಮ ಬ್ಯಾಕ್ಟೀರಿಯಾಗಳಿವೆ. ಇದು ಅತಿಸಾರದ ಸಮಸ್ಯೆಗೆ ಕಾರಣವಾದ ಕೆಟ್ಟ ಬ್ಯಾಕ್ಟೀರಿಯಾಗಳನ್ನು ನಾಶ ಮಾಡಿ ಸೋಂಕನ್ನು ನಿವಾರಿಸಿ ಅತಿಸಾರದ ಸಮಸ್ಯೆನ್ನು ಕಡಿಮೆ ಮಾಡುತ್ತದೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...