Kannada Duniya

ಹೊಟ್ಟೆಯ ಸಮಸ್ಯೆಯನ್ನು ಹೋಗಲಾಡಿಸಲು ಈ ಟೀ ಕುಡಿಯಿರಿ….!

ಸಾಮಾನ್ಯವಾಗಿ ಬ್ಯಾಕ್ಟೀರಿಯಾಗಳಿಂದಾಗಿ ಬಾಯಿ ಮತ್ತು ಹೊಟ್ಟೆಯಲ್ಲಿ ಸಮಸ್ಯೆ ಉಂಟಾಗುತ್ತದೆ. ಬಾಯಿಯಲ್ಲಿ ಬೆಳೆದ ಬ್ಯಾಕ್ಟೀರಿಯಾಗಳು ಹೊಟ್ಟೆ ಸೇರಿದಾಗ ಅಲ್ಲಿ ಹೊಟ್ಟೆ ನೋವು, ಅತಿಸಾರ, ವಾಂತಿ ಸಮಸ್ಯೆಗಳು ಕಾಡುತ್ತದೆ. ಹಾಗಾಗಿ ನಿಮ್ಮ ಬಾಯಿ ಮತ್ತು ಹೊಟ್ಟೆ ಆರೋಗ್ಯವಾಗಿರಲು ಲವಂಗದ ಟೀ ಕುಡಿಯಿರಿ.

ಲವಂಗ ಪ್ರೋಟೀನ್, ಕಬ್ಬಿಣ ಕಾರ್ಬೋಹೈಡ್ರೇಟ್ ಗಳು, ಕ್ಯಾಲ್ಸಿಯಂ, ಸೋಡಿಯಂ, ಮೆಗ್ನಿಶಿಯಂ, ರಂಜಕ, ಪೊಟ್ಯಾಶಿಯಂ, ಸತು ಮತ್ತು ತಾಮ್ರ ಮುಂತಾದ ಪೋಷಕಾಂಶಗಳನ್ನು ಒಳಗೊಂಡಿದೆ. ಹಾಗಾಗಿ ಲವಂಗವನ್ನು ಪುಡಿ ಮಾಡಿ ನೀರಿನೊಂದಿಗೆ ಬೆರೆಸಿ ಸುಮಾರು 5 ನಿಮಿಷಗಳ ಕಾಲ ಕುದಿಸಿ. ಬಳಿಕ ಫಿಲ್ಟರ್ ಮಾಡಿ ಅದಕ್ಕೆ ಬೆಲ್ಲ ಅಥವಾ ಜೇನುತುಪ್ಪ ಬೆರೆಸಿ.

Pepper and clove for weightloss: ತೂಕ ಇಳಿಸಲು ಕರಿಮೆಣಸು ಮತ್ತು ಲವಂಗವನ್ನು ಈ ರೀತಿಯಲ್ಲಿ ಬಳಸಿ…!

ಈ ಟೀ ಕುಡಿಯುವುದರಿಂದ ನಿಮ್ಮ ಬಾಯಿ ಮತ್ತು ಹೊಟ್ಟೆ ಆರೋಗ್ಯವಾಗಿರುತ್ತದೆ. ಇದು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿರುವ ಕಾರಣ ಬಾಯಿಯಲ್ಲಿರುವ ಬ್ಯಾಕ್ಟೀರಿಯಾಗಳು ಹೊಟ್ಟೆ ಸೇರದಂತೆ ಅವುಗಳನ್ನು ನಾಶ ಮಾಡುತ್ತದೆ. ಮತ್ತು ನಿಮ್ಮ ಹಲ್ಲುಗಳು ಆರೋಗ್ಯವಾಗಿರುತ್ತದೆ. ಬಾಯಿಯಲ್ಲಿ ದುರ್ವಾಸನೆ ಬರುತ್ತಿದ್ದರೆ ಅದು ನಿವಾರಣೆಯಾಗುತ್ತದೆ. ಒಸಡಿನಲ್ಲಿ ಕಂಡುಬರುವ ರಕ್ತಸ್ರಾವ ನಿವಾರಣೆಯಾಗುತ್ತದೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...