Kannada Duniya

ಸೋಂಪು ಕಾಳು ಬಳಸಿ ಕೂದಲಿನ ಪೋಷಣೆ ಹೀಗೆ ಮಾಡಿ….!

ತೆಂಗಿನೆಣ್ಣೆ ಹಾಗೂ ಸೋಂಪು ಕಾಳಿನ ಮಿಶ್ರಣದಿಂದ ಕೂದಲಿಗೆ ಸಂಬಂಧಿಸಿದ ಹಲವು ಸಮಸ್ಯೆಗಳನ್ನು ಪರಿಹರಿಸಬಹುದು ಎಂಬುದು ನಿಮಗೆ ತಿಳಿದಿದೆಯೇ?

ಇಳಿ ವಯಸ್ಸಿನಲ್ಲೇ ಕಾಣಿಸಿಕೊಳ್ಳುವ, ಕೂದಲು ಬಿಳಿಯಾಗುವ ಸಮಸ್ಯೆಗೆ ಸೋಂಪು ಪೇಸ್ಟ್ ಹೇಳಿ ಮಾಡಿಸಿದ ಔಷಧ. ಮಳಿಗೆಗಳಲ್ಲಿ ಸಿಗುವ ರಾಸಾಯನಿಕ
ಭರಿತ ಉತ್ಪನ್ನಗಳ ಬದಲು ಸೋಂಪು ಹಾಗೂ ತೆಂಗಿನ ಎಣ್ಣೆಯ ಮಿಶ್ರಣವನ್ನು ತಯಾರಿಸಿ ಕೂದಲಿಗೆ ಹಚ್ಚುವುದರಿಂದ ಕೂದಲು ಕಪ್ಪಾಗುತ್ತದೆ ಹಾಗೂ ಅಕಾಲಿಕವಾಗಿ ಬೆಳ್ಳಗಾಗುವುದಿಲ್ಲ.

ಅತಿಯಾದ ಡ್ಯಾಂಡ್ರಫ್ ಸಮಸ್ಯೆ ಇರುವವರು ಕೂಡ ಈ ಪೇಸ್ಟ್ ಅನ್ನು ನೆತ್ತಿಯ ಭಾಗಕ್ಕೆ ಹಚ್ಚಿ ಅರ್ಧ ಗಂಟೆ ಬಳಿಕ ಸ್ನಾನ ಮಾಡುವುದರಿಂದ ತಲೆಹೊಟ್ಟಿನ ಸಮಸ್ಯೆ ನಿವಾರಣೆಯಾಗುತ್ತದೆ. ವಿಪರೀತ ಕೂದಲು ಉದುರುವ ಸಮಸ್ಯೆಯನ್ನು ಇದು ದೂರ ಮಾಡುತ್ತದೆ. ಕೂದಲು ಬಲಿಷ್ಠವಾಗಿ ನೀಳವಾಗಿ ಬೆಳೆಯುವಂತೆ ಮಾಡುತ್ತದೆ.

ಋತುಬಂಧದ ಸಮಸ್ಯೆಗಳನ್ನು ನಿವಾರಿಸಲು ಮಹಿಳೆಯರು ಈ ಯೋಗಾಸನ ಮಾಡಿ….!

ಇದಕ್ಕಾಗಿ ಮೊದಲು ನೀವು ಸೋಂಪು ಕಾಳನ್ನು ತುಸುವೇ ಬಿಸಿ ಮಾಡಿ ಮಿಕ್ಸಿಯಲ್ಲಿ ರುಬ್ಬಿ. ಈ ಪುಡಿಯನ್ನು ಎಣ್ಣೆಗೆ ಸೇರಿಸಿ ಅರ್ಧ ಗಂಟೆ ಬಳಿಕ ತಲೆಗೆ ಹಚ್ಚಿಕೊಳ್ಳಿ. ಇದು ಕೂದಲಿನ ಸಮಗ್ರ ಬೆಳವಣಿಗೆಗೆ ಸಹಕಾರಿ.

 


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...