Kannada Duniya

ವಯಸ್ಸಾಗಿರುವುದು ನೆಪವಾಗದಿರಲಿ….ಇದರಿಂದ ಆರೋಗ್ಯ ಹದಗೆಡಬಹುದು….!

ವಯಸ್ಸಾಗಿದೆ, ಎಲ್ಲಿ ಹೋಗಲು ಕೈ ಕಾಲು ನೋವು ಎಂಬ ಕಾರಣ ನೀಡಿ ಮೂಲೆ ಸೇರುವ ಬದಲು ಆ್ಯಕ್ಟಿವ್ ಆಗಿರಲು ಏನು ಮಾಡಬಹುದು ಎಂದು ಯೋಚಿಸಿ. ಜೀವನ ಶೈಲಿಯಲ್ಲಿ ಕೆಲವು ಬದಲಾವಣೆ ಮಾಡಿಕೊಂಡರೆ ನೋವಿನ ಹಾಗೂ ಜಡ ಜೀವನ ಶೈಲಿಗೆ ಕಾರಣವಾಗಬಹುದು.

ನಿಯಮಿತ ವ್ಯಾಯಾಮದಿಂದ ಸ್ನಾಯುಗಳ ಆರೋಗ್ಯ ಸುಧಾರಿಸುತ್ತದೆ. ಹೃದಯಾಘಾತದ ಅಪಾಯ ಕಡಿಮೆಯಾಗುತ್ತದೆ. ವಯಸ್ಸು 50ರ ಗಡಿ ದಾಟಿದರೂ ಮೂವತ್ತರ ಹುಮ್ಮಸ್ಸನ್ನು ನಿಮ್ಮಲ್ಲಿ ತುಂಬುತ್ತದೆ.

ರಿಟೈರ್ ಆದ ಬಳಿಕ ದಿನಾ ಬೆಳಿಗ್ಗೆ ವಾಕಿಂಗ್ ಮಾಡಿ. ಇದು ಕೂಡಾ ದೇಹಕ್ಕೆ ಉತ್ತಮ ವ್ಯಾಯಾಮ ನೀಡುತ್ತದೆ. ಹೃದಯ ಬಡಿತವನ್ನು ಹೆಚ್ಚಿಸಿ ಉಸಿರಾಟ ಪ್ರಕ್ರಿಯೆಯನ್ನು ಸರಾಗಗೊಳಿಸುತ್ತದೆ. ನಿದ್ರಾಹೀನತೆ ಸಮಸ್ಯೆಯನ್ನೂ ಇದು ಪರಿಹರಿಸುತ್ತದೆ.

Sleeping Tips:ಹೀಗೆ ಮಾಡಿದರೆ ನಿದ್ದೆ ಬರುವುದು ಖಚಿತ….!

ನಿಮಗೆ ಆಸಕ್ತಿ ಇರುವ ಕೆಲಸದಲ್ಲಿ ತೊಡಗಿಕೊಳ್ಳಿ. ಈಜುವುದು ನಿಮ್ಮ ಹವ್ಯಾಸವಾಗಿದ್ದರೆ ಇಳಿ ವಯಸ್ಸಿನಲ್ಲೂ ಅದನ್ನು ಮುಂದುವರಿಸಿ. ಇದು ದೇಹದಲ್ಲಿ ಅತಿಯಾದ ಬೊಜ್ಜು ಬೆಳೆಯದಂತೆ ನೋಡಿಕೊಳ್ಳುತ್ತದೆ. ಯೋಗಾಸನ ಮಾಡಿ. ಹದಿನೈದರಿಂದ ಇಪ್ಪತ್ತು ನಿಮಿಷಗಳ ಯೋಗಾಸನದಿಂದ ದೇಹತೂಕವೂ ಕಡಿಮೆಯಾಗುತ್ತದೆ, ನಿದ್ದೆಯ ಗುಣಮಟ್ಟವೂ ಸುಧಾರಿಸುತ್ತದೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...