Kannada Duniya

ಸಸ್ಯಹಾರ ಹೆಚ್ಚು ಸೇವಿಸುವುದರಿಂದ ಗೊರಕೆ ಸಮಸ್ಯೆ ದೂರವಾಗುತ್ತದೆಯೇ?

ಕೆಲವರು ನಿದ್ರೆಯಲ್ಲಿ ಜೋರಾಗಿ ಗೊರಕೆ ಹೊಡೆಯುತ್ತಾರೆ. ಇದರಿಂದ ಅವರ ಜೊತೆಯಲ್ಲಿ ಮಲಗುವವರಿಗೆ ನಿದ್ರೆ ಮಾಡಲು ಕಷ್ಟವಾಗುತ್ತದೆ. ಹಾಗಾಗಿ ಈ ಗೊರಕೆ ಸಮಸ್ಯೆಯನ್ನು ಹೋಗಲಾಡಿಸಲು ಹೆಚ್ಚು ಸಸ್ಯಹಾರ ಸೇವಿಸಬೇಕು ಎಂದು ಹೇಳಲಾಗುತ್ತದೆ. ಇದು ನಿಜವೇ? ಎಂಬುದನ್ನು ತಿಳಿಯಿರಿ.

ಇತ್ತೀಚೆಗೆ ನಡೆದ ಸಂಶೋಧನೆಯೊಂದರ ಪ್ರಕಾರ, ತರಕಾರಿ, ಹಣ್ಣುಗಳು, ಬೀಜಗಳು ಮತ್ತು ಧಾನ್ಯಗಳನ್ನು ಹೆಚ್ಚು ಸೇವಿಸುವಂತಹ ಜನರಲ್ಲಿ ನಿದ್ರೆಯಲ್ಲಿ ಉಸಿರುಗಟ್ಟುವಂತಹ ಸಮಸ್ಯೆ ಕಂಡುಬರುವುದಿಲ್ಲ. ಇದರಿಂದ ಗೊರಕೆ ಸಮಸ್ಯೆ ಕಾಡುವುದಿಲ್ಲ ಎನ್ನಲಾಗಿದೆ.

ನಿದ್ರೆಯಲ್ಲಿ ಉಸಿರುಗಟ್ಟುವಿಕೆ ಸಮಸ್ಯೆ ಇರುವವರು ಹೆಚ್ಚಾಗಿ ಗೊರಕೆ ಹೊಡೆಯುತ್ತಾರೆ. ಅಲ್ಲದೇ ಕಾರ್ಬೋಹೈಡ್ರೇಟ್, ಸಿಹಿ ಪಾನೀಯಗಳು, ಸಕ್ಕರೆಯಂಶ ಮತ್ತು ಉಪ್ಪಿನಾಂಶ ಹೆಚ್ಚಾಗಿರುವ ಆಹಾರವನ್ನು ಸೇವಿಸುವವರು ಗೊರಕೆ ಸಮಸ್ಯೆಗೆ ಒಳಗಾಗುತ್ತಾರಂತೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...