Kannada Duniya

ಹಾವು ಕಚ್ಚಿದವರ ದೇಹದಲ್ಲಿ ಈ ಲಕ್ಷಣಗಳು ಗೋಚರಿಸುತ್ತದೆಯಂತೆ

ಬೇಸಿಗೆಯಲ್ಲಿ ಹೆಚ್ಚಾಗಿ ಹಾವುಗಳು ಬಿಲದಿಂದ ಹೊರಗೆ ಓಡಾಡುತ್ತಿರುತ್ತದೆ. ಹಾಗಾಗಿ ಈ ಸಮಯದಲ್ಲಿ ಎಲ್ಲೆಂದರಲ್ಲಿ ಹಾವು ಇರುತ್ತದೆ. ಆದಕಾರಣ ಓಡಾಡುವಾಗ ಬಹಳ ಎಚ್ಚರಿಕೆಯಿಂದಿರಬೇಕು. ಕೆಲವೊಮ್ಮ ಹಾವು ಕಚ್ಚುವ ಸಂಭವವಿರುತ್ತದೆ. ಇದರಿಂದ ಜೀವಕ್ಕೆ ಹಾನಿಯಾಗಬಹುದು. ಆದರೆ ಹಾವು ಕಚ್ಚಿದರೆ ದೇಹದಲ್ಲಿ ಈ ಲಕ್ಷಣಗಳು ಗೋಚರಿಸುತ್ತದೆಯಂತೆ.

ಹಾವು ಕಚ್ಚಿದರೆ ಅದು ಕಚ್ಚಿದ ಸ್ಥಳದಲ್ಲಿ ಅದರ ಹಲ್ಲಿನ ಗುರುತು ಅಂದರೆ 2 ಚುಕ್ಕೆಗಳು ಕಂಡುಬರುತ್ತದೆ. ಮತ್ತು ಅದರ ಸುತ್ತಲೂ ನೀಲಿ ಬಣ್ಣ ಇರುತ್ತದೆ.

ಅಲ್ಲದೇ ಹಾವು ಕಚ್ಚಿದ ವ್ಯಕ್ತಿ ನಿದ್ರೆಗೆ ಜಾರುತ್ತಾನೆ. ಮತ್ತು ಪ್ರಜ್ಞಾಹೀನ ಸ್ಥಿತಿಯಲ್ಲಿರುತ್ತಾನೆ. ಅವರ ಕಣ್ಣಿನ ರೆಪ್ಪೆಗಳು ಭಾರವೆನಿಸುತ್ತದೆ. ಹಾಗಾಗಿ ಕಣ್ಣುಗಳನ್ನು ಮುಚ್ಚುತ್ತಿರುತ್ತಾರೆ.

ಕೆಲವರು ವಾಂತಿ ಸಮಸ್ಯೆಯನ್ನು ಅನುಭವಿಸುತ್ತಾರೆ. ಹೊಟ್ಟೆ ನೋವು ಮತ್ತು ಉಸಿರಾಟದ ತೊಂದರೆಗಳು ಕಾಡುತ್ತದೆ.

ಅಲ್ಲದೇ ಮುಖ ಸೇರಿದಂತೆ ದೇಹದ ವಿವಿಧ ಭಾಗಗಳಲ್ಲಿ ಕೆಂಪು ದದ್ದುಗಳು, ಊತ ಕಂಡುಬರುತ್ತದೆ. ಮತ್ತು ವ್ಯಕ್ತಿ ಮೂತ್ರ ವಿಸರ್ಜನೆ ಮಾಡಿದರೆ ಮೂತ್ರ ಕೆಂಪು ಅಥವಾ ಕಂದು ಬಣ್ಣದಲ್ಲಿರುತ್ತದೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...