Kannada Duniya

ಪೋಷಕರೇ ಅತೀಯಾಗಿ ಮೊಬೈಲ್ ಬಳಸುತ್ತಿದ್ದೀರಾ….? ಹಾಗಾದ್ರೆ ಇದನ್ನು ಮಿಸ್ ಮಾಡದೇ ಓದಿ!

ಇತ್ತೀಚಿನ ದಿನಗಳಲ್ಲಿ ಮೊಬೈಲ್ ಇಲ್ಲದ ಸಂದರ್ಭವನ್ನು ಊಹಿಸುವುದು ಅಸಾಧ್ಯ ಎಂಬ ಪರಿಸ್ಥಿತಿ ಸೃಷ್ಟಿಯಾಗಿದೆ. ಅದರಲ್ಲೂ ಈ ಫೋನ್ ಗಳು ಮಕ್ಕಳು ಮತ್ತು ಹೆತ್ತವರ ನಡುವೆ ದೊಡ್ಡ ಕಂದಕವನ್ನೇ ಸೃಷ್ಟಿಸುತ್ತದೆ ಎಂಬ ಆಘಾತಕಾರಿ ಅಂಶವನ್ನು ಇತ್ತೀಚಿನ ಅಧ್ಯಯನಗಳು ಬಹಿರಂಗಪಡಿಸಿವೆ.
ಸಮೀಕ್ಷೆಯಲ್ಲಿ ಪಾಲ್ಗೊಂಡ 90ಕ್ಕೂ ಹೆಚ್ಚು ಪೋಷಕರು ಮೊಬೈಲ್ ಇಲ್ಲದೆ ದಿನ ಕಳೆಯಲು ಸಾಧ್ಯವೇ ಇಲ್ಲ ಎಂಬುದನ್ನು ಒಪ್ಪಿಕೊಂಡಿದ್ದಾರೆ. ಅದೇ ರೀತಿ ಅವರು ತಮ್ಮ ಫ್ಯಾಮಿಲಿ ಟೈಮನ್ನು ಮೊಬೈಲ್ ಫೋನ್ ನುಂಗಿರುವುದನ್ನು ಒಪ್ಪಿಕೊಂಡಿದ್ದಾರೆ.
ಅಚ್ಚರಿಯ ವಿಷಯವೆಂದರೆ ಈ ಸಮೀಕ್ಷೆಯಲ್ಲಿ ಪಾಲ್ಗೊಂಡ ಶೇ. 90ರಷ್ಟು ಪೋಷಕರಿಗೆ ತಾವು ಮೊಬೈಲ್ ಫೋನ್ ಗಳಲ್ಲಿ ಅತಿಯಾಗಿ ತೊಡಗಿಕೊಂಡ ಕಾರಣಕ್ಕೆ ಮಕ್ಕಳೊಂದಿಗೆ ಸಾಕಷ್ಟು ಸಮಯವನ್ನು ಕಳೆಯಲು ಸಾಧ್ಯವಾಗುತ್ತಿಲ್ಲ ಎಂಬ ಅರಿವಿದೆ. ಆದರೆ ಇದರಿಂದ ಹೊರಬರುವುದು ಹೇಗೆ ಎಂಬುದನ್ನು ತಿಳಿಯದೆ ಒದ್ದಾಡುತ್ತಿದ್ದಾರೆ.
ಶೇಕಡ 87ರಷ್ಟು ಜನ ಬೆಳಿಗ್ಗೆ ಕಣ್ ತೆರೆದ ತಕ್ಷಣ ಮೊಬೈಲ್ ಬೇಕೇ ಬೇಕು ಎಂಬ ಮನಸ್ಥಿತಿಯನ್ನು ಹೊಂದಿದ್ದಾರೆ. ಊಟ ಮಾಡುವಾಗಲೂ ಮೊಬೈಲ್ ನೋಡುತ್ತಿರುತ್ತೇವೆ ಎಂಬುದನ್ನು ಶೇಕಡ 60ರಷ್ಟು ಮಂದಿ ಒಪ್ಪಿಕೊಂಡಿದ್ದಾರೆ. ತಾವು ಫೋನ್ ನಲ್ಲಿ ಕೆಲಸ ಅಥವಾ ತೊಡಗಿ ಕೊಂಡ ವೇಳೆ ಮಕ್ಕಳು ಏನಾದರೂ ಪ್ರಶ್ನಿಸಿದರೆ ಅದರಿಂದ ಕಿರಿಕಿರಿಯಾಗುತ್ತದೆ ಎಂಬುದನ್ನು ಕೂಡ ಈ ಪೋಷಕರು ಒಪ್ಪಿಕೊಂಡಿರುವುದು ಆಘಾತಕಾರಿ ಅಂಶವೇ ಹೌದು.

Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...