Kannada Duniya

ಬಂಗುಡೆ ಮೀನಿನ ಸಾರನ್ನು ಮಾಡಿ ನೋಡಿ….!

ಮೀನು ಸಾರು ಎಂದರೆ ಕೆಲವರು ಬಾಯಿ ಚಪ್ಪರಿಸಿಕೊಂಡು ತಿನ್ನುತ್ತಾರೆ. ಇಲ್ಲಿ ಬಂಗುಡೆ ಮೀನಿನ ಸಾರನ್ನು ಮಾಡುವ ವಿಧಾನ ಇದೆ. ಇದು ಕುಚ್ಚಲಕ್ಕಿ ಅನ್ನದ ಜೊತೆ ತುಂಬಾನೇ ಚೆನ್ನಾಗಿರುತ್ತದೆ.

ಮೀನು-1 ಕೆಜಿ, ತೆಂಗಿನಹಾಲು-1 ಕಪ್, ಶುಂಠಿ-ಸಣ್ನ ತುಂಡು, ಹಸಿಮೆಣಸು-2, ಈರುಳ್ಳಿ-1/2, ಉಪ್ಪು ರುಚಿಗೆ ತಕ್ಕಷ್ಟು, ½ ಕಪ್- ತೆಂಗಿನಕಾಯಿ ತುರಿ, ಸ್ವಲ್ಪ-ಕೊತ್ತಂಬರಿಸೊಪ್ಪು, ¼ ಟೀ ಸ್ಪೂನ್-ಜೀರಿಗೆ, 4 ಎಳು-ಬೆಳ್ಳುಳ್ಳಿ, ಈರುಳ್ಳಿ- 1, ಹುಣಸೆಹಣ್ಣು-ಸಣ್ಣ ತುಂಡು, ಕಾಳುಮೆಣಸು-8 ಕಾಳು, ಒಣಮೆಣಸು-10, 2 ದೊಡ್ಡ ಚಮಚ-ಧನಿಯಾ.

ಮೊದಲು ಮಿಕ್ಸಿ ಜಾರಿಗೆ, ತೆಂಗಿನಕಾಯಿ ತುರಿ, ಜೀರಿಗೆ, ಧನಿಯಾ, ಬೆಳ್ಳುಳ್ಳಿ, ಈರುಳ್ಳಿ, ಹುಣಸೆಹಣ್ಣು, ಕಾಳುಮೆಣಸು, ಒಣಮೆಣಸು ಹಾಕಿ ಸ್ವಲ್ಪ ನೀರು ಸೇರಿಸಿ ನಯವಾಗಿ ರುಬ್ಬಿಕೊಳ್ಳಿ.ನಂತರ ಮೀನನ್ನು ಕತ್ತರಿಸಿಕೊಂಡು ಚೆನ್ನಾಗಿ ಕ್ಲೀನ್ ಮಾಡಿಕೊಳ್ಳಿ. ರುಬ್ಬಿದ ಮಸಾಲೆಗೆ ಸ್ವಲ್ಪ ನೀರು ಸೇರಿಸಿ ಉಪ್ಪು, ಹಸಿಮೆಣಸು, ಜಜ್ಜಿದ ಶುಂಠಿ, ಅರ್ಧ ಈರುಳ್ಳಿಯನ್ನು ಚಿಕ್ಕದಾಗಿ ಕತ್ತರಿಸಿ ಹಾಕಿ ಕುದಿಸಿಕೊಳ್ಳಿ.

ಈ ದಿಕ್ಕಿನಲ್ಲಿ ಗಿಡಗಳನ್ನು ನೆಡಬೇಡಿ… ಇದರಿಂದ ಆರ್ಥಿಕ ಸಮಸ್ಯೆ ಕಾಡುತ್ತದೆ…!

ಇದು ಕುದ್ದ ಬಳಿಕ ಮೀನು ಹಾಕಿ 3 ನಿಮಿಷಗಳ ಕಾಲ ಕುದಿಸಿಕೊಳ್ಳಿ. ಬಳಿಕ ದಪ್ಪಗಿನ ತೆಂಗಿನಕಾಯಿ ಹಾಲು ಸೇರಿಸಿ 2 ನಿಮಿಷಗಳ ಕಾಲ ಕುದಿಸಿಕೊಂಡು ಕೊತ್ತಂಬರಿಸೊಪ್ಪು ಸೇರಿಸಿದರೆ ರುಚಿಯಾದ ಬಂಗುಡೆ ಮೀನಿನ ಸಾರು ಸವಿಯಲು ಸಿದ್ಧ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...